ಬೆಂಗಳೂರು:- ಇದು ವಾಹನ ಮಾಲೀಕರಿಗೆ ಖುಷಿಯ ವಿಚಾರ. ಯಾವುದೇ ಆರ್ಟಿಓ ಅಧಿಕಾರಿಗಳು, ಬ್ರೋಕರ್ಗಳ ಹಾವಳಿ ಇಲ್ಲದೆ ವಾಹನಗಳ ಎಫ್ಸಿ ಮಾಡಿಸಿಕೊಳ್ಳಬಹುದು.
ನೀವು ಯಾವತ್ತೂ ನನ್ನ ಹೃದಯದಲ್ಲಿದ್ದೀರಿ: RCB ಅಭಿಮಾನಿಗಳಿಗೆ ಸಿರಾಜ್ ಭಾವನಾತ್ಮಕ ಪತ್ರ!
ಈ ಹಿಂದೆ ವಾಹನಗಳಿಗೆ ಎಫ್ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್ಸಿ ಆಗುತ್ತದೆ. ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್ಸಿ ಮಾಡಿಸಬೇಕು.
ಎಫ್ಸಿ ಮಾಡುವಾಗ ನಡೆಸುವ ತಪಾಸಣೆಗಳು ಏನೇನು?
ಇಂಜಿನ್ ಸೌಂಡ್
ಹೊಗೆ ತಪಾಸಣೆ
ಸ್ಪೀಡ್ ಗವರ್ನರ್
ಹೆಡ್ ಲೈಟ್
ಇಂಡಿಕೇಟರ್
ವೈಪರ್
ಹಾರನ್
ಬ್ರೇಕ್ ಲೈಟ್ಸ್
ಪೇಟಿಂಗ್
ಬಾಡಿ ಡೆಟೋರೆಟೆಡ್
ಟೈರ್ಗಳ ತಪಾಸಣೆ
ವೆಹಿಕಲ್ ವೈಬ್ರೇಷನ್
ಇಂಜಿನ್ ಆಯಿಲ್ ಫಿಟ್ನೆಸ್
ಈ ಹಿಂದೆ ಎಫ್ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್ಟಿಒ ಇನ್ಸ್ಪೆಕ್ಟರ್ಗಳು ಏನಾದರೂ ಕಾರಣ ಹೇಳಿ ಎಫ್ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ ಎನ್ನಲಾಗಿದೆ.