ಮುಂಬೈ :- ಮೊಬೈಲ್ ಗಾಗಿ ಪ್ರಾಣಬಿಟ್ಟ ಅಪ್ಪ-ಮಗ ಇಬ್ಬರು ನೇಣಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದಿದೆ.
ನಿಮ್ಮ ಮನೆ ಹಿತ್ತಲಲ್ಲಿ ಸಿಗುವ ಈ ಎಲೆ ಕ್ಯಾನ್ಸರ್ಗೆ ದಿವ್ಯೌಷಧ! ಮಧುಮೇಹಿಗಳಿಗೂ ಬೆಸ್ಟ್!
ತಂದೆ ಮೊಬೈಲ್ ಕೊಡಿಸದ್ದಕ್ಕೆ ಮಗ ನೇಣಿಗೆ ಶರಣಾಗಿದ್ದು, ಮಗನ ಸಾವಿನಿಂದ ನೊಂದು ತಂದೆಯೂ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ.
ಮಗ ಬುಧವಾರ ಸಂಜೆ ಮೊಬೈಲ್ ಕೊಡಿಸುವಂತೆ ತಂದೆ ಬಳಿ ಹಠ ಮಾಡಿದ್ದಾನೆ. ಆದರೆ ತಂದೆ ತಾನು ಜಮೀನು ಹಾಗೂ ವಾಹನಕ್ಕೆ ಪಡೆದ ಸಾಲವನ್ನು ಮರುಪಾವತಿಸಬೇಕಿದ್ದು, ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ.
ಮಗ ಮನೆಗೆ ವಾಪಸ್ ಬಾರದ್ದನ್ನು ಕಂಡು ತಂದೆ ಜಮೀನಿನ ಬಳಿ ತೆರಳಿದಾಗ ಮಗ ನೇಣಿಗೆ ಶರಾಣಾಗಿರುವುದು ಕಂಡುಬಂದಿದೆ. ಇದರಿಂದ ಆಘಾತಗೊಂಡ ತಂದೆ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಇವರನ್ನು ಹುಡುಕಿಕೊಂಡು ಜಮೀನಿನ ಬಳಿ ತೆರಳಿದಾಗ ಇಬ್ಬರೂ ಒಂದೇ ಹಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.