ಅಮೇರಿಕಾ:– ಅಮೇರಿಕಾದ ಓಹಿಯೋದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಇಲ್ಲೊಬ್ಬರು ವ್ಯಕ್ತಿ ಮಗನಿಗೆ ನೀಡಿದ ರಾಶಿ ರಾಶಿ ಹೋಮ್ವರ್ಕ್ ನೋಡಿ ಚಿಂತೆಗೀಡಾಗಿ, ಯಾಕೆ ಇಷ್ಟೆಲ್ಲಾ ಹೋಮ್ವರ್ಕ್ ನೀಡೋದು ಅಂತ ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತಾ ಶಾಲಾ ಆಡಳಿತ ಮಂಡಳಿ ಆ ವ್ಯಕ್ತಿಯ ವಿರುದ್ಧ ಠಾಣೆಯನ್ನು ದೂರನ್ನು ನೀಡಿದ್ದು, ಇದೀಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ ನಲ್ಲಿ ಮಹಿಳೆ ಮೇಲೆ ಹಲ್ಲೆ ಕೇಸ್ – ಕಂಡಕ್ಟರ್ ಹೇಳಿದ್ದೇನು!?
ಇಲ್ಲಿನ ನಿವಾಸಿಯಾಗಿರುವಂತಹ ಆಡಂ ಸೈಜ್ಮೋರ್ ಎಂಬವರೇ ಬಂಧಿತ ವ್ಯಕ್ತಿ. ಆಡಂ ಅವರ ಮಗ ಕ್ರೇಮರ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯಲ್ಲಿ ಮಗನಿಗೆ ಸಿಕ್ಕಾಪಟ್ಟೆ ಹೋಮ್ವರ್ಕ್ ನೀಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಲೆಯ ಪ್ರಾಂಶುಪಾಲರಾದ ಜೇಸನ್ ಮೆರ್ಜ್ ಅವರಿಗೆ ಕರೆ ಮಾಡಿ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ನಂತರವೂ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿದ್ದಾರೆ.
ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಕಂಡು ಈ ಬಗ್ಗೆ ದೂರು ನೀಡಲು ಈ ವ್ಯಕ್ತಿ ಆಕ್ಸ್ಫರ್ಡ್ ಪೋಲೀಸ್ ಇಲಾಖೆಗೂ ಕರೆ ಮಾಡಿದ್ದಾರೆ. ಠಾಣೆಗೆ ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 18 ಬಾರಿ ಕರೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಫೋನ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಯನ್ನು ತಲುಪಲು ಸಾಧ್ಯವಾಗದಿದ್ದಾಗ ಆಡಂ ಅಧಿಕಾರಿಯನ್ನು ಅವರ ಮನೆಯಲ್ಲಿಯೇ ಭೇಟಿಯಾಗುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ.