ಬೆಳಗಾವಿ:- ಈಜಲು ಹೋಗಿ ಕೃಷಿ ಹೊಂಡದಲ್ಲಿ ತಂದೆ ಸೇರಿ ಎರಡು ಮಕ್ಕಳು ಸಾವನ್ನಪ್ಪಿದ ಘಟನೆ ಜರುಗಿದೆ.
ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಮಗದುಮ ಸರ್ಕಾರಿ ಶಾಲೆಯ ಶಿಕ್ಷಕ ಸೇರಿ ಎರಡು ಮಕ್ಕಳು ಸಾವನ್ನಪ್ಪಿರುವುದು ಎನ್ನಲಾಗಿದೆ.
ಶಿಕ್ಷಕ ಕಲ್ಲಪ್ಪ ಗಾಣಿಗೇರ್ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಪಕ್ಕದಲ್ಲಿ ಇರುವ ಕೃಷಿಹೊಂಡ ಒಂದರಲ್ಲಿ ಈಜಲು ಹೋಗಿದ್ದಾರೆ.
ಅಮಾವಾಸ್ಯೆಯ ಕರಾಳ ದಿನ ಶಿಕ್ಷಕ ಹಾಗೂ ತನ್ನ ಎರಡು ಮಕ್ಕಳಾದ 11ವರ್ಷದ ಮದನ ಹಾಗೂ 9 ವರ್ಷ ಮನೋಜ ಇವರನ್ನು ರವಿವಾರ ರಜೆ ಇದ್ದ ಕಾರಣ ತನಗೂ ಈಜಲು ಹೋಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹಗ್ಗ ಕಟ್ಟಿ ಕೃಷಿ ಹೊಂಡಕ್ಕೆ ಈಜಾಡಲು ಹೋದಾಗ ಆಯ ತಪ್ಪಿ ಮಕ್ಕಳ ಸಮೇತ ನೀರಿನಲ್ಲಿ ಮುಳುಗಿ ಶವವಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಿಕ್ಷಕ ಹಾಗೂ ಇಬ್ಬರ ಮಕ್ಕಳ ಸಾವು ಸಹಿಸದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.