ತುಮಕೂರು: ಭೀಕರ ಅಪಘಾತದಲ್ಲಿ ತಂದೆ ಮಗ ಸ್ಥಳದಲ್ಲೇ ಸಾವನಪ್ಪಿದ್ದಾರೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಕಡಬಗೆರೆ ಬ್ರಿಡ್ಜ್ ಬಳಿ ಅವಘಡ ನಡೆದಿದ್ದು, ಗುರುರಾಜು(35) , ಪುತ್ರ ರಿಷಾಂಕ್ (2) ಮೃತ ದುರ್ದೈವಿಗಳು.
ಬೆಳಗ್ಗೆ 6.30ರ ಸುಮಾರಿಗೆ ಮುಂಡರಿಗಿಯಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಮುಂದೆ ನಿಂತಿದ್ದ ಸಿಮೆಂಟ್ ಬಲ್ಕರ್ಗೆ ಡಿಕ್ಕಿ ಹೊಡೆದಿದ್ದು, ತಂದೆ-ಮಗ ಸಾವನ್ನಪ್ಪಿದ್ದಾರೆ. ಪತ್ನಿ ಹರ್ಷಿತಾ (28) ಸ್ಥಿತಿ ಗಂಭೀರವಾಗಿದ್ದು, ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.