ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಬಳಿ ನಿನ್ನೆ ಬೆಳಗ್ಗೆ ನಡೆದಿದೆ. ಮೊಹಮ್ಮದ್ ಯೂನಿಸ್(20) ಮೃತ ದುರ್ಧೈವಿಯಾಗಿದ್ದು,
ಅಬ್ಬಾ.. ವೀಳ್ಯದೆಲೆ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ..? ಇಲ್ಲಿದೆ ನೋಡಿ ಮಾಹಿತಿ
ಫೆ.24 ರಂದು ಐವರು ಸ್ನೇಹಿತರು ಕಾರಿನಲ್ಲಿ ಧಾರವಾಡದಿಂದ ದೇವನಹಳ್ಳಿಯ ವಿಜಯಪುರಕ್ಕೆ ಹೊರಟಿದ್ದರು. ಈ ವೇಳೆ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿ ಹಿನ್ನೆಲೆ ಕಾರಿನಲ್ಲಿದ್ದ ಐವರಿಗೂ ಗಂಭೀರ ಗಾಯಗಳಾಗಿತ್ತು.
ಐವರಲ್ಲಿ ಚಿಕಿತ್ಸೆ ಫಲಿಸದೆ ಕಾರು ಚಾಲಕ ಮೃತ ಪಟ್ಟಿದ್ದಾನೆ. ಕಾರು ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.