ರಾಮನಗರ: ಹೊಸ ವರ್ಷದಂದೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ತಾವರಕೆರೆ ರಸ್ತೆ ಬಳಿ ನಡೆದಿದೆ. ಮಂಜು(31), ಕಿರಣ್ (30) ಮೃತ ದುರ್ಧೈವಿಗಳಾಗಿದ್ದು, ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Bank Holidays: ಗ್ರಾಹಕರೇ ಇಲ್ಲಿ ಗಮನಿಸಿ.. ಜನವರಿಯಲ್ಲಿ ಇಷ್ಟು ದಿನ ಬ್ಯಾಂಕ್ಗಳಿಗೆ ರಜೆ!
ಮೂಲತಃ ಮಾಗಡಿ ತಾಲ್ಲೂಕಿನ ಚೋಳನಾಯಕನಹಳ್ಳಿ ಗ್ರಾಮದವರಾದ ಸ್ನೇಹಿತರು ಟೀ ಕುಡಿಯಲು ಎಂದು ಹೋಗುವ ವೇಳೆ ಅವಘಡ ಸಂಭವಿಸಿದೆ. ಇನ್ನೋವ ಕ್ರಿಸ್ಟ್ ಕಾರಿನಲ್ಲಿ ಹೋಗುವ ವೇಳೆ ಮಾಗಡಿ ತಾಲ್ಲೂಕಿನ ಹೊಸಪಾಳ್ಯದ, ಜನತಾ ಕಾಲೋನಿ ಬಳಿ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇನ್ನೂ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ