ಬೆಂಗಳೂರು:- ಮೂರು ಜನರ ಗುಂಪೊಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಕೊನೆಗೂ ಹಲ್ಲೆಗೊಳಗಾದ ಪುನೀತ್ ಎಂಬಾತ ಚಿಕಿತ್ಸೆ ಪಲಿಸದೇ ಸಾವನ್ನಪ್ಪಿದ ಘಟನೆ ಜರುಗಿದೆ.
R Ashok: ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಎಂದು ಖರ್ಗೆ ಒಪ್ಪಿಕೊಂಡಂತಿದೆ: ಆರ್ ಅಶೋಕ್!
ಪುನೀತ್ ಹಾಗೂ ಸ್ನೇಹಿತರು ಅಕ್ಟೋಬರ್ 26 ರಾಮನಗರದ ಜಕ್ಕೇನಹಳ್ಳಿಯಲ್ಲಿರುವ ಫಾರ್ಮ್ಹೌಸ್ಗೆ ಹೋಗಿದ್ದರು. ಅಂದು ರಾತ್ರಿ 10.30ರ ಸುಮಾರಿಗೆ ಮೂವರು ಏಕಾಏಕಿ ಫಾರ್ಮ್ಹೌಸ್ಗೆ ನುಗಿದ್ದಾರೆ. ಚಂದು, ನಾಗೇಶ್, ಮುರುಳಿ ಎನ್ನುವವರು ಏಕಾಏಕಿ ರೂಮಿಗೆ ಬಂದು ಸ್ವಿಮ್ಮಿಂಗ್ ಪೂಲ್ನಲ್ಲಿ ಆಟವಾಡುತ್ತಿದ್ದ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ
ಪುನೀತ್ ಸ್ನೇಹಿತರು ವಿಡಿಯೋ ಮಾಡದಂತೆ ಹೇಳಿದಾಗ ನಾವು ಲೋಕಲ್ ಹುಡುಗರು, ಇಲ್ಲಿ ನಮ್ಮದೇ ಹವಾ ಎಂದು ಮಾತನಾಡಿದ್ದಾರೆ. ನಾವು ಏನು ಬೇಕಾದರೂ ಮಾಡುತ್ತೇವೆ. ಇಲ್ಲಿಗೆ ಯಾರ ಪರ್ಮಿಷನ್ ತಗೊಂಡು ಬಂದಿದ್ದೀರಾ ಎಂದು ಹೆಣ್ಣು ಮಕ್ಕಳನ್ನು ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.
ಮೂವರು ಯುವಕರನ್ನ ಹೊರಗೆ ಹೋಗಿ ಎಂದು ಯುವಕರು ಹೇಳುತ್ತಿದ್ದಂತೆ ಓರ್ವ ಹೊರಗಿಂದ ದೊಣ್ಣೆ ತಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆಗ ಹಲ್ಲೆ ಮಾಡುವುದನ್ನ ಪುನೀತ್ ವಿಡಿಯೋ ಮಾಡಲು ಯತ್ನಿಸುತ್ತಾನೆ. ವಿಡಿಯೋ ಮಾಡುತ್ತಿದ್ದಂತೆ ದೊಣ್ಣೆಯಿಂದ ಪುನೀತ್ಗೆ ಹಲ್ಲೆ ಮಾಡಿದ್ದಾರೆ. ಪುನೀತ್ ತಲೆಗೆ ಜೋರಾಗಿ ಪೆಟ್ಟಾಗಿ ಅಲ್ಲೇ ಕುಸಿದು ಬಿದ್ದಿದ್ದಾನೆ.
ಇದೀಗ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.