ಕೊಡಗು: ಗುಂಡಿಯನ್ನು ತಪ್ಪಿಸಲು ಹೋಗಿ ಮರಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಆದ ಘಟನೆ ನಿನ್ನೆ ರಾತ್ರಿ 8:30 ಸಮಯದಲ್ಲೇ ನಡೆದಿದೆ.. ಬಸ್ ಸಂಪೂರ್ಣವಾಗಿ ಮಗುಚಿಕೊಂಡಿದ್ದು ಡ್ರೈವರ್ ಕಾಲು ಜಖಂಗೊಂಡು ಗೋಣಿಕೊಪ್ಪಲ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯಾಣಿಕರು ಮುಂಭಾಗದ ಗ್ಲಾಸ್ ಮೂಲಕ ಹಾರಿ ಕೆಲವರಿಗೆ ಕಾಲು ಮುರಿತವಾಗಿದೆ.
ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮೈಸೂರಿನಿಂದ ವಿರಾಜಪೇಟೆಗೆ ತೆರಳುತ್ತಿತ್ತು. ದೇವರ ಪುರದಲ್ಲಿ ಬರುತ್ತಿರುವಾಗ ಮುಖ್ಯ ರಸ್ತೆಯಲ್ಲಿ ಉಂಟಾಗಿರುವ ಗುಂಡಿಯನ್ನು ತಪ್ಪಿಸಲು ಹೋಗಿ ಮರಕೆ ಡಿಕ್ಕಿ ಆಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ! ಕಷ್ಟಗಳು ಬೆನ್ನು ಬೀಳುತ್ತೆ
ಮೈಸೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ KSRTC ಬಸ್ ತಿತಿಮತಿಯ ಸಮೀಪದ ದೇವಪುರದಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 17 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನ ಕಾಲು ಮುರಿತವಾಗಿ ಗೋಣಿಕೊಪ್ಪ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.