ಬೇಸಿಗೆಯಲ್ಲಿ ದೇಹದ ತೂಕ ಇಳಿಸುವುದು ಸುಲಭ ಅಂತಲೇ ಹೇಳಬಹುದು. ಈ ಋತುವಿನಲ್ಲಿ ಅನೇಕ ಆರೋಗ್ಯಕರ ಆಹಾರಗಳು ಲಭ್ಯವಿವೆ. ಇವು ತೂಕವನ್ನು ಕಳೆದುಕೊಳ್ಳುವಲ್ಲಿ ತುಂಬಾ ಸಹಾಯಕಾರಿಯಾಗಿವೆ. ಇವುಗಳನ್ನು ಹೆಚ್ಚಾಗಿ ತಿಂದರೆ ನಿಮ್ಮ ತೂಕ ಬೇಗನೇ ಕಡಿಮೆಯಾಗುತ್ತದೆ.
ಸಿಎಂ ಬಳಿ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿ ಅರೆಸ್ಟ್! ಪೊಲೀಸ್ ವಿಚಾರಣೆ ವೇಳೆ ಆತ ಹೇಳಿದಷ್ಟು!
ಮಜ್ಜಿಗೆ: ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ.
ಬೆಳ್ಳುಳ್ಳಿ: ಹೃದಯ ರೋಗಿಗಳಿಗೆ ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಬೆಳ್ಳುಳ್ಳಿ ಸೇವನೆ ಹೊಟ್ಟೆಯು ತುಂಬಿದೆ ಎಂದು ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಸಕ್ಕರೆ ನಿಯಂತ್ರಣದಲ್ಲಿ
ಸಾಸಿವೆ ಎಣ್ಣೆ: ಈ ಎಣ್ಣೆ ಕೊಬ್ಬನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ಇತರ ಎಣ್ಣೆಗಳಿಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಸಾಸಿವೆ ಎಣ್ಣೆಯಲ್ಲಿ ಆಹಾರಗಳನ್ನು ಬೇಯಿಸಬೇಕು. ಇದರಲ್ಲಿರುವ ಅಂಶಗಳು ಕ್ಯಾಲೊರಿಗಳನ್ನು ಸುಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಗಸೆಬೀಜಗಳು: ಫ್ಲೆಕ್ಸ್ ಸೀಡ್ಸ್ ಅನ್ನು ವಿಶ್ವದ ವಿವಿಧೆಡೆ ಶತಮಾನಗಳಿಂದ ತಿನ್ನಲಾಗುತ್ತಿದೆ. ಅಗಸೆ ಬೀಜಗಳು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ಫೈಬರ್ ಹೇರಳವಾಗಿದೆ
ಎಳ್ಳು: ಎಳ್ಳನ್ನು ನಾವು ಭಾರತೀಯರು ಹೇರಳವಾಗಿ ಬಳಸುತ್ತೇವೆ. ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಕೊಬ್ಬಿನಾಮ್ಲವಿದೆ, ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಅರಿಶಿನ: ಕೊಬ್ಬನ್ನು ಸುಡುವ ಅನೇಕ ಗುಣಗಳನ್ನು ಅರಿಶಿನ ಹೊಂದಿದೆ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ಇದರೊಂದಿಗೆ, ಅರಿಶಿನವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಹ ಪ್ರಯೋಜನಕಾರಿಯಾಗಿದೆ.
ಜೇನುತುಪ್ಪ: ತೂಕ ನಷ್ಟಕ್ಕೆ ಜೇನುತುಪ್ಪವು ತುಂಬಾ ಸಹಾಯಕವಾಗಿದೆ. ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಜೇನು ಮತ್ತು ನಿಂಬೆಹಣ್ಣು ಹಾಕಿ ಸೇವಿಸುವುದರಿಂದ ಕೊಬ್ಬು ಕಡಿಮೆಯಾಗುತ್ತದೆ. ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ.
ತೆಂಗಿನ ಹಾಲು: ಇದನ್ನು ಕುಡಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಮಧ್ಯಮ ಸರಪಳಿ ಟ್ರೈಗ್ಲಿಸರೈಡ್ಸ್ (MCTs) ಎಂಬ ಕೊಬ್ಬನ್ನು ಹೊಂದಿರುತ್ತದೆ. MCT ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಲು ಬಿಡುವುದಿಲ್ಲ. ತೂಕವನ್ನು ಕಡಿಮೆ ಮಾಡುತ್ತದೆ. ತೆಂಗಿನಕಾಯಿಯನ್ನು ಸೇವಿಸಿದ ನಂತರ ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.