ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammad Shami) ಅವರ ಉತ್ತರಪ್ರದೇಶದಲ್ಲಿರುವ ಫಾರ್ಮ್ ಹೌಸ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಮೊಹಮ್ಮದ್ ಶಮಿಯವರು ಉತ್ತರ ಪ್ರದೇಶದಲ್ಲಿ (Uttar Pradesh) ಬೆಳೆದವರು. ಸದ್ಯ ತಮ್ಮ ತವರೂರಿನಲ್ಲಿ ಶಮಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ವೀಶ್ವಕಪ್ ಲ್ರಿಕೆಟ್ನಲ್ಲಿ ಅಮೋಘ ಸಾಧನೆ ಮಾಡಿರುವ ಅವರು, ಸಹಜವಾಗಿಯೇ ಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಅವರ ಫಾರ್ಮ್ ಹೌಸ್ಗೆ (Farm House) ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಶಮಿಯವರ ಜೊತೆ ಫೋಟೋಗಾಗಿ ಅಭಿಮಾನಿಗಳು ಪ್ರತಿನಿತ್ಯ ಬಂದು ಕಾಯುತ್ತಿದ್ದಾರೆ. ಹೀಗಾಗಿ ಮನೆ ಬಳಿ ಭದ್ರತೆ (Security) ಹೆಚ್ಚಿಸಲಾಗಿದೆ.
ಈ ಕುರಿತು ಖುದ್ದು ಮೊಹಮ್ಮದ್ ಶಮಿ ಅವರೇ ಇತ್ತೀಚೆಗೆ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ವೀಡಿಯೋದಲ್ಲಿ ಫಾರ್ಮ್ ಹೌಸ್ ಮುಂದೆ ಅಭಿಮಾನಿಗಳು ಕ್ಯೂನಲ್ಲಿ ಜಮಾಯಿಸಿರುವುದನ್ನು ಕಾಣಬಹುದಾಗಿದೆ. ಭದ್ರತಾ ಸಿಬ್ಬಂದಿ ಗೇಟ್ ಬಳಿ ನಿಂತು ಅಭಿಮಾನಿಗಳನ್ನು ನಿಭಾಯಿಸುತ್ತಿರುವುದು ಕಂಡುಬಂದಿದೆ.