ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಮತ್ತು ಟಿ20 ಸರಣಿಗಳೆರಡನ್ನೂ ಕ್ಲೀನ್ ಸ್ವೀಪ್ ಮಾಡಿ ಮೆರೆಯುತ್ತಿರುವ ಭಾರತ ಇದೀಗ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆಬಿಸಿಸಿಐ ಆಯ್ಕೆ ಸಮಿತಿಯ ಒಂದು ನಿರ್ಧಾರದ ಬಗ್ಗೆ ಮಾತ್ರ ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ತಣಿದಿಲ್ಲ. ಅದು ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಿರುವುದು.
ಬೂಮ್ರಾ ಅವರಿಗೆ ಈ ಸಾಮರ್ಥ್ಯ ಇಲ್ಲ ಎಂದಲ್ಲ. ಆದರೆ ಬಹಳ ಕಾಲದಿಂದ ತಂಡದ ಸದಸ್ಯರಾಗಿರುವ ಅವರಿಗೆ ಅವರಿಗೆ ನಾಯಕತ್ವದ ಅನುಭವ ಅಷ್ಟಾಗಿ ಇಲ್ಲ. ಹೀಗಾಗಿ ತಂಡದ ಪ್ರಮುಖ ಬೌಲರ್ ಮೇಲೆ ಅನವಶ್ಯಕ ಒತ್ತಡ ಹೇರುವ ಬದಲಾಗಿ ಭವಿಷ್ಯದ ದೃಷ್ಟಿಯಿಂದ ಬೇರೆ ಯುವ ಆಟಗಾರನ ಹೆಗಲಿಗೆ ಈ ಹೊಣೆ ಹೊರಿಸಬಹುದಿತ್ತು ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯವಾಗಿದೆ.
ಈಗಾಗಲೇ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಗೇಮ್ ಅನ್ನು ಸಹ ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಜವಾಬ್ದಾರಿ ವಹಿಸಿದರೆ ತುಂಬಾ ಚೆನ್ನಾಗಿ ನಿಭಾಯಿಸಬಲ್ಲರು. ಅವರಿಗೆ ಗೇಮ್ ನ ಬಗ್ಗೆ ಎಷ್ಟು ಜ್ಞಾನ ಇದೆ ಎಂಬುದು ಅವರಲ್ಲಿ ನೀವು ಮಾತನಾಡಿದರೆ ತಿಳಿಯುತ್ತದೆ.ತಂಡಕ್ಕೆ ಏನು ಬೇಕು ಎಂಬುದು ಅವರಿಗೆ ಗೊತ್ತು. ಕೆಲವೊಂದು ಪರಿಸ್ಥಿತಿಗಳಲ್ಲಿ ಮೇಲೇರಲು ನೀವು ನಾಯಕನ ಅಗತ್ಯ ಇದೆ ಎಂದು ನಿಮಗೆ ಅನ್ನಿಸಿದರೆ, ಬೂಮ್ರಾ ಅವರು ಸಹ ಆ ಸಂದರ್ಭದಲ್ಲಿ ಸಮರ್ಥರು. ಹೀಗಾಗಿ ದೀರ್ಘ ಕಾಲದಿಂದ ಅವರು ನಮ್ಮ ನಾಯಕತ್ವದ ಗುಂಪಿನಲ್ಲಿ ಇದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.