ವಾಣಿಜ್ಯ ಬೆಳೆಗಳತ್ತ ಚಿತ್ತ ಹರಿಸಿದ್ದ ರೈತರು ಈಗ ಮತ್ತೆ ಭತ್ತದ ಕೃಷಿಗೆ ಮರಳುತ್ತಿದ್ದಾರೆ. ನೆಲ್ಲು(ಭತ್ತ) ಹಾಗೂ ಹುಲ್ಲಿಗೆ ಬೆಲೆ ಹೆಚ್ಚಾಗಿರುವುದರಿಂದ ಬೀಳುಬಿಟ್ಟಿದ್ದ ಜಮೀನಿನಲ್ಲಿ ನಾಟಿ ಮಾಡುಲು ಸಿದ್ಧತೆ ನಡೆಸಿದ್ದಾರೆ.
ಕಳೆದ ವರ್ಷ ಇದೇ ಸಮಯದಲ್ಲಿ 1 ಕ್ವಿಂಟಲ್ಗೆ 1500 ರಿಂದ 1600 ರೂ.ಗಳಿದ್ದ ಭತ್ತಕ್ಕೆ ಈ ಬಾರಿ ಕೊಯ್ಲು ಕಾಲದಲ್ಲೇ ಕ್ವಿಂಟಲ್ಗೆ 3 ಸಾವಿರ ರೂ. ಧಾರಣೆ ಕಂಡಿದೆ. ಆಗಸ್ಟ್ ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಲೇ ಬಂದಿದ್ದು ಡಿಸೆಂಬರ್, ಜನವರಿ ತಿಂಗಳಲ್ಲಿ1 ಕ್ವಿಂಟಾಲ್ಗೆ 3 ಸಾವಿರ ರೂ. ದಾಟಿರುವುದು ರೈತರು ಮತ್ತೆ ಭತ್ತದ ಕೃಷಿಯತ್ತ ಆಸಕ್ತಿ ತೋರುವಂತೆ ಮಾಡಿದೆ.
ಒಂದು ಕಾಲದಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧವಾಗಿತ್ತು. ತಾಲೂಕಿನಲ್ಲಿ ಸುಮಾರು 5 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ, ಭತ್ತದ ಧಾರಣೆ ಕ್ವಿಂಟಲ್ಗೆ 700ರಿಂದ 800 ರೂ., ಕೆಲ ವರ್ಷಗಳಲ್ಲಿ1200ರಿಂದ 1300 ರೂ.ಗಳಿಗೆ ಮಾರಾಟವಾಗುತ್ತಿತ್ತು. ಲಾಭಕ್ಕಿಂತ ವೆಚ್ಚವೇ ಹೆಚ್ಚಾಗಿದ್ದರಿಂದ ಬಹುತೇಕ ರೈತರು ಭತ್ತ ಬೆಳೆಯುವುದನ್ನು ಕೈಬಿಟ್ಟಿದ್ದರು
ಹಲವು ವರ್ಷಗಳಿಂದ ಭತ್ತದ ವ್ಯಾಪಾರ ಮಾಡುತ್ತಿದ್ದೇನೆ. 5 ವರ್ಷದ ಹಿಂದೆ 20 ಸಾವಿರ ಕ್ವಿಂಟಲ್ ಭತ್ತ ಖರೀದಿಸುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರಿಂದ 10 ಸಾವಿರ ಕ್ವಿಂಟಲ್ ಮಾತ್ರ ಸಿಗುತ್ತಿದೆ. ಭತ್ತದ ಅಭಾವ ಸೃಷ್ಟಿಯಾಗುತ್ತಿದೆ. ತಾಲೂಕಿನಲ್ಲಿಅರ್ಧಕ್ಕಿಂತ ಹೆಚ್ಚು ರೈತರು ಭತ್ತ ಬೆಳೆಯುವುದನ್ನು ಕೈಬಿಟ್ಟಿದ್ದಾರೆ