ಬೆಳಗಾವಿ: ವಕ್ಫ್ ವಿಚಾರದ ಬಗ್ಗೆ ಸದನದಲ್ಲಿ ದೊಡ್ಡ ಗದ್ದಲವೇ ನಡೆದುಹೋಯ್ತು..ವಕ್ಫ್ ಬಗ್ಗೆ ಸರ್ಕಾರಕ್ಕೆಡ್ಯಾಮೇಜ್ ಮಾಡ್ತೇವೆ ಅಂತ ಹೊರಟ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರಿಯಾಗಿಯೇ ಟಾಂಗ್ ಕೊಡ್ತು. ಇದರ ಬೆನ್ನಲ್ಲೇ ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಉಂಟಾದ ಬೆಳೆ, ಜೀವಹಾನಿ, ಮನೆ ಹಾನಿ ಸೇರಿದಂತೆ ವಿವಿಧ ಹಾನಿಗೆ ಸಂಬಂಧಿಸಿದಂತೆ ಒಟ್ಟು 297 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಭೂಕುಸಿತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಎರಡೂವರೆ ವರ್ಷಗಳಲ್ಲಿ 425 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಆದರೆ, ಕೇಂದ್ರ ಸರಕಾರದಿಂದ ಈ ವರ್ಷದ ಎನ್ಡಿಆರ್ಎಫ್ ಪರಿಹಾರ ಈವರೆಗೂ ಸಂದಾಯವಾಗಿಲ್ಲ,’’ ಎಂದರು. ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬೆಳೆ ಹಾನಿ ಉದ್ದೇಶಕ್ಕೆ ಒಟ್ಟು 297 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.75 ರಷ್ಟು ಮಂದಿಗೆ ಪರಿಹಾರ ತಲುಪಿದೆ. ಬಾಕಿ ಉಳಿದವರಿಗೆ 3-4 ದಿನಗಳಲ್ಲಿ ಜಮೆಯಾಗಲಿದೆ,’’ ಎಂದರು.
ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ರಸ್ತೆ, ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಪುನರ್ಸ್ಥಾಪನೆಯ ತುರ್ತು ಪರಿಹಾರಕ್ಕಾಗಿ 80.47 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಪೈಕಿ 60.16 ಕೋಟಿ ರೂ. ಬಿಡುಗಡೆಯಾಗಿದೆ. ಜಿ
ಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ಗಳ ಖಾತೆಯಲ್ಲಿತುರ್ತು ಪರಿಹಾರಕ್ಕಾಗಿ 579 ಕೋಟಿ ರೂ. ಲಭ್ಯವಿದೆ. ಪ್ರವಾಹದಿಂದ ಮನೆಗೆ ನೀರು ನುಗ್ಗಿರುವ ಕಡೆ ನಿತ್ಯದ ಖರ್ಚು ನಿಭಾಯಿಸಲು 5,000 ರೂ. ವಿತರಿಸಲಾಗಿದ್ದು, 5.62 ಕೋಟಿ ರೂ. ಬಿಡುಗಡೆಯಾಗಿದೆ,’’ ಎಂದು ಮಾಹಿತಿ ನೀಡಿದರು.