ಕಲಘಟಗಿ: ತಾಲೂಕಿನ ಮಾರ್ಕೆಟಿಂಗ್ ಸೊಸೈಟಿಯ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ,ಹಾಗೂ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಫೆಡ ಸಂಸ್ಥೆಯ ಪರವಾಗಿ ಎಫ್ ಎ ಕ್ಯೂ ಗುಣಮಟ್ಟದ ಸೋಯಾಬಿನ್ ಖರೀದಿ ಕೇಂದ್ರ ತೆರೆಯಲಾಗಿದೆ.
Tamarind Seed Benefits: ಹುಣಸೆ ಬೀಜದ ಆರೋಗ್ಯಕಾರಿ ಪ್ರಯೋಜನಗಳು ಒಂದೇ ಎರಡೇ..? ಇಲ್ಲಿದೆ ನೋಡಿ
ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಹಾಗೂ ನಿಗದಿತ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ 4892 ರೂ ತಾಲೂಕಿನ ಪ್ರತಿಯೊಬ್ಬ ರೈತರು ಪಟ್ಟಣದ ಮಾರ್ಕೆಟಿಂಗ್ ಸೊಸೈಟಿ ಸಂಪರ್ಕಿಸಲು ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ ಮುರಳಿ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟಿಸಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಸೊಸೈಟಿಯ ಉಪಾಧ್ಯಕ್ಷ ದ್ಯಾಮಣ್ಣ ಬಡಿಗೇರ್,ಸದಸ್ಯರಾದ ವೃಷಭೇಂದ್ರ ಪಟನಶೆಟ್ಟಿ, ಕಲ್ಲಪ್ಪ ಅರಿಶಿನಗಿರಿ, ನಿಂಬಣ್ಣ ಕುಬ್ಬಾಳ, ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಬಸನಗೌಡ ಮುದಿಗೌಡ್ರು, ಯಲ್ಲಪ್ಪ ಚೌರಗಿ, ಮಹೇಶ್ ಆಲಗೂರು, ಕಶ್ ಹನುಮಣ್ಣವರ್ ಇತರರು ಉಪಸ್ಥಿತರಿದ್ದರು.
ವರದಿ: ಮಾರುತಿ ಲಮಾಣಿ