ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಪುನಃ ರೈತರ ಮೇಲೆ ದೌರ್ಜನ್ಯ ಮಾಡುವುದಕ್ಕೆ ಹಾಗೂ ರೈತರ ಜಮೀನು ವಶಪಡಿಸಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಪ್ರಯತ್ನ ಮಾಡುತ್ತಿದ್ದಾರೆಂದು ರೈತ ಮುಖಂಡ ಸಿಪಿಎಂ ಗೋಪಾಲ್ ಅವರು ತಿಳಿಸಿದ್ರು.
Muda Scam: ತನಿಖೆ ಆರಂಭಿಸಿದ ಲೋಕಾಯುಕ್ತ; ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್!
ಶ್ರೀನಿವಾಸಪುರದ ಕೋಟಬಲ್ಲಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಅರಣ್ಯ ಇಲಾಖೆ ಈಗ ಮಾಡುತ್ತಿರುವುದು ಮೊದಲು ಮಾಡಿರುವುದು ಕಾನೂನು ಪ್ರಕಾರ ಉಲ್ಲಂಘನೆಯೆಂದು ಹೈಕೋರ್ಟ್ ಈಗಾಗಲೇ ಸ್ಟೇ ಮಾಡಿದೆ ಅರಣ್ಯ ಇಲಾಖೆ ಮೇಲೆ ಸುಪ್ರೀಂ ಕೋರ್ಟ್ ನಲ್ಲಿ ಕೇಸು ದಾಖಲಾಗಿದೆ ಅದನ್ನು ಗಮನ ಹರಿಸಬೇಕು ಅರಣ್ಯ ಇಲಾಖೆಗೆ ಪರಿಸರ ಕಾಪಾಡಬೇಕು ಎಂಬ ಕಾಳಜಿ ಇದ್ದರೆ ಬೆಂಗಳೂರಿನಲ್ಲಿ ಪರಿಸರ ಹಾಳಾಗಿದೆ ಎಂಬ ಕುರಿತು ಕಳೆದ 15 ದಿನಗಳ ಹಿಂದೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ವರದಿ ನೀಡಿದೆ.
ಬೆಂಗಳೂರು ನಗರದಲ್ಲಿ ರಿಸರ್ವ್ ಫಾರೆಸ್ಟ್ 6600 ಎಕರೆಯಲ್ಲಿ ಈಗಾಗಲೇ ಕಟ್ಟಡಗಳನ್ನು ಹಾಗೂ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶದಂತೆ ಮೂರು ಎಕರೆ ಒಳಗಿನ ರೈತರ ಜಮೀನನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದೆಂಬ ಅರಣ್ಯ ಇಲಾಖೆ ಕಾರ್ಯದರ್ಶಿ ಆದೇಶ ನೀಡಿದ್ದರೂ ಕಾನೂನು ಉಲ್ಲಂಘನೆ ಮಾಡಿ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದೀರಿ ನೀವು ಬೆಂಗಳೂರಿನಲ್ಲಿ ಒತ್ತುವರಿಯಾಗಿರುವಂತಹ ಅರಣ್ಯ ಭೂಮಿಯನ್ನು ಮೊದಲು ತೆರವುಗೊಳಿಸಿ ನಾವು ರೈತರು ಕಾನೂನು ಹೋರಾಟಕ್ಕೆ ಸಿದ್ದರಾಗುದ್ದೇವೆ ಕಾನೂನಿನ ಮೂಲಕ ನಿಮಗೆ ಪಾಠ ಕಳುಹಿಸುತ್ತೇವೆಂದು ಎಚ್ಚರಿಕೆ ನೀಡಿದರು.