ಬೆಂಗಳೂರು:- ಕಾನೂನು ಬಾಹಿರವಾಗಿ ರೈತರ ಜಮೀನು ವಕ್ಫ್ ಗೆ ಸೇರಲು ಬಿಡಲ್ಲ ಎಂದು MB ಪಾಟೀಲ್ ಹೇಳಿದ್ದಾರೆ.
ಕೆರೆಯಲ್ಲಿ ಹಸುವಿನ ಮೈ ತೊಳೆಯಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು!
ಈ ಸಂಬಂಧ ಮಾತನಾಡಿದ ಅವರು,ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಏನು ಹೇಳಿದ್ದಾರೆ ಎಲ್ಲಾ ನೋಡಿದ್ದಾರೆ. ಬಿಜೆಪಿ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಬಂದಿತ್ತು. ಈಗಾಗಲೇ ಸಿಎಂ ಕ್ಲಿಯರ್ ಮಾಡಿದ್ದಾರೆ. ಯಾವ ರೈತರ ಜಮೀನು ಸರ್ಕಾರ ಪಡೆಯೋದಿಲ್ಲ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಎಲ್ಲಾ ದಾಖಲಾತಿ ತೆಗೆದು ರೈತರ ಜಾಗ ಇದ್ದರೆ ರೈತರಿಗೆ ಕೊಡುತ್ತೇವೆ. ವಕ್ಫ್ ಆಸ್ತಿ ಇದ್ದರೆ ಅವರಿಗೆ ಕೊಡುತ್ತೇವೆ. ಸರ್ಕಾರದ ಜಾಗ ಇದ್ದರೆ ಸರ್ಕಾರ ಪಡೆಯುತ್ತದೆ. ಬಿಜೆಪಿ ಅವರು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಇಂಚು ರೈತರ ಆಸ್ತಿ ಕಾನೂನುಬಾಹಿರವಾಗಿ ವಕ್ಫ್ ಆಸ್ತಿ ಆಗಲು ನಾನು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.