ಬೆಂಗಳೂರು:- ರೈತರ ಜಮೀನು ವಕ್ಫ್ ಬೋರ್ಡ್ಗೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ಪುಣ್ಯತಿಥಿ: ಹುಬ್ಬಳ್ಳಿಯಲ್ಲಿ ಮಟನ್ ಊಟ ಇಟ್ಟು ಅಭಿಮಾನಿಗಳ ಕಣ್ಣೀರು!
ಈ ಸಂಬಂಧ ಮಾತನಾಡಿದ ಅವರು, ವಿಜಯಪುರದಲ್ಲಿ ಯಾವುದೇ ರೈತನ ಜಮೀನು ವಕ್ಫ್ ಬೋರ್ಡ್ಗೆ ಹೋಗಲ್ಲ ಎಂದು ಹೇಳಿದರು. ನಿನ್ನೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ, ರೈತರ ಜಮೀನು ವಕ್ಫ್ ಬೋರ್ಡ್ಗೆ ಹೋಗಲ್ಲ ಎಂದು ಹೇಳಿದ್ದಾರೆ.
ಮತ್ತು ಯಾವುದಾದರೂ ರೈತನಿಗೆ ನೋಟೀಸ್ ಬಂದಿದ್ದರೆ ಅದನ್ನು ವಾಪಸ್ಸು ಕೊಡಲಿ ಎಂದು ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.