ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗೆ ದರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈಗಾಗಾಲೇ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿದರು, ದರ ಘೋಷಣೆ ಮಾಡಿಲ್ಲಾ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಈಗಾಗಾಲೇ ಕಬ್ಬು ಕಟಾವು ವೆಚ್ಚ ಹಾಗು ಸಾಗಾಣಿಕೆ ವೆಚ್ಚ ಹೊರತುಪಡಿಸಿ 2850 ರೂಗಳನ್ನ ನಿಗದಿ ಪಡಿಸಿದೆ.
ಜಿಲ್ಲೆಯ ರೈತರು ನೆರೆ ರಾಜ್ಯಕ ದರ ತೆರಳದಂತೆ ತಡೆಯಬೇಕಾದರೆ ಕೂಡಲೇ ಜಿಲ್ಲೆಯ ಸಕ್ಕರೆ ಕಾರ್ಖಾನೆಯ ಮಾಲೀಕರು ದರ ನಿಗದಿ ಮಾಡಿ ಘೋಷಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ರಾಜ್ಯದಲ್ಲಿ ಬರಗಾಲ ಆವರಸಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಉತ್ಪಾದನೆಗೆ ಎಪ್ಆರ್ಪಿ ದರಕ್ಕಿಂತ ಹೆಚ್ಚಿನ ವೆಚ್ಚ ತಗುಲುತ್ತಿದೆ. ಒಂದು ಹಾಗಾಗಿ ಸರ್ಕಾರ ದರ ನೀಡಬೇಕು. ಒಂದು ಟನ್ ಕಬ್ಬು ಉತ್ಪಾದನೆಗೆ 3850 ರೂಗಳು ವೆಚ್ಚವಾಗುತ್ತಿದ್ದು, ಉತ್ಪಾದನಾ ವೆಚ್ಚಕ್ಕೆ ಲಾಭ ಸೇರಿಸಿ ಎಪ್ಆರ್ಪಿ ದರ ನಿಗದಿ ಮಾಡುವಂತೆ ಆಗ್ರಹಿದರು.
ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ನೆರವಿಗೆ ಬಾರದ ಸಹ ಪ್ರಯಾಣಿಕರು
ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, ಈಗಾಗಲೇ ಬರಗಾಲದಿಂದಾಗಿ ರೈತರಿಗೆ ಉತ್ತಮ ಬೆಳೆ ಬಂದಿಲ್ಲಾ. ರೈತರು ಆತಂಕದಲ್ಲಿದ್ದಾರೆ. ರೈತರೇ ಬೆಳೆ ಬೆಳೆಯದಿದ್ರೆ ತಿನ್ನಲು ಏನು ಇರುವುದಿಲ್ಲಾ. ಬೇರೆ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ರೈತನೇ ಬೆಳೆ ಬೆಳಯದಿದ್ರೆ ಇಲ್ಲು ಅದೇ ಪರಿಸ್ಥಿತಿ ಬರಬಹುದು. ಹಾಗಾಗಿ ಅದಕ್ಕೆ ಆಸ್ಪದ ನೀಡದೇ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದರು.