ಮಂಡ್ಯ :– ರೈತರು ತಮ್ಮ ಪಾಲಿನ ಹಕ್ಕಗಳನ್ನು ಪಡೆದು ಕೊಳ್ಳಲು ಅವರಿಗೆ ಶಕ್ತಿ ತುಂಬುತ್ತಾ, ಜೀವಿತಾವಧಿವರೆಗೂ
ರೈತರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ರೈತನಾಯಕ ದಿ.ಪ್ರೊ.ನಂಜುಂಡಸ್ವಾಮಿ ಅವರು ಎಂದು ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ಹೇಳಿದರು.
ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ!
ಮದ್ದೂರು ಪಟ್ಟಣದ ತಾಲೂಕು ರೈತ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸಂವಿಧಾನ ಸಂರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರನ್ನು ಹೇಗೆ ನೆನಪಿಸಿಕೊಳ್ಳುತ್ತೇವೆೆಯೋ ಆದೇ ರೀತಿ ಅವಿದ್ಯಾವಂತ ರೈತ ಸಮುದಾಯದಲ್ಲಿ ಕಾನೂನು ಅರಿವುಮೂಡಿಸಿ ತಮ್ಮ ಶಾಸನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ಮೂಲಕ ಹೋರಾಟದ ಕಿಚ್ಚುಹೊತ್ತಿಸಿದ ಮಹಾನ್ ನಾಯಕ ಪ್ರೊ.ನಂಜುಂಡಸ್ವಾಮಿ ಅವರನ್ನು ಪ್ರತಿಯೊಬ್ಬ ರೈತರು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರೈತರು ಸಾಲಗಾರರಲ್ಲ ಸರ್ಕಾರವೇ ಬಾಕೀದಾರ ಎಂಬ ಉದ್ಘೋಷದೊಂದಿಗೆ ರೈತರಿಗೆ ಸರ್ಕಾರದ ವಿರುದ್ಧ ಎದೆಯುಬ್ಬಿಸಿ ಮಾತನಾಡಲು ಕಲಿಸಿದ ವಿಶ್ವ ನಾಯಕ ನಂಜುಂಡಸ್ವಾಮಿ ಅವರು,
ಸರಕಾರಗಳಿಂದ ರೈತರಿಗೆ ಅನ್ಯಾಯವಾದಾಗ ನ್ಯಾಯ ಸಿಗುವವರೆಗೂ ಒಂದಲ್ಲ ಒಂದು ರೀತಿಯ ಹೋರಾಟ ರೂಪಿಸುತ್ತಿದ್ದರು. ಜೀವನದುದ್ದಕ್ಕೂ ಚಳವಳಿಗಳನ್ನು ನಡೆಸಿ ಕೊಂಡು ಬಂದ ಅವರ ತತ್ತ್ವ, ಆದರ್ಶಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೊ.ನಂಜುಂಡಸ್ವಾಮಿ ಅವರು ಸ್ವಾರ್ಥಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಸರ್ಕಾರ ರೈತರ ವಿರುದ್ಧ ಕಾಯಿದೆಗಳನ್ನು ತಂದಾಗ ಚಳವಳಿಗಳನ್ನು ರೂಪಿಸಿ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿದ್ದರು. ಆದರೆ, ಅಂಥ ಮಹಾನ್ ಚೇತನ ನಮ್ಮ ಕಣ್ಣಮುಂದೆ ಇಲ್ಲದಿದ್ದರು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ರೈತರಿಗೆ ಅನ್ಯಾಯವಾದಾಗ ರೈತ ಸಮುದಾಯ ಹೋರಾಟ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಹೇಳಿದರು.
ಇದೇ ವೇಳೆ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಲಾ ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ