ಚೆಂಡು ಹೂಗಳಿಗೆ ಬೆಲೆ ಇಲ್ಲದೆ ರೈತರು ತೋಟದಲ್ಲಿ ಬೆಳೆದ ಚೆಂಡು ಹೂವು ಕಟಾವು ಮಾಡದೆ ತೋಟದಲ್ಲೇ ಉದುರಿ ನೆಲ ಕಚ್ಚುತ್ತಿವೆ.
ಒಂದು ಎಕರೆಯಲ್ಲಿ ಹೂ ಬೆಳೆದ ಹಲಸಿನಮರದೊಡ್ಡಿಯ ರೈತ ಚಿಕ್ಕಲಿಂಗೇಗೌಡ ಮಾತನಾಡಿ, ಸುಮಾರು 1 ಎಕರೆ ಪ್ರದೇಶದಲ್ಲಿಒಂದು ಚೆಂಡು ಹೂ ಸಸಿಗೆ 4 ರೂ. ನೀಡಿ ನಾಟಿ ಮಾಡಿ, ಸುಮಾರು 50 ಸಾವಿರ ರೂ. ಖರ್ಚು ಮಾಡಿ ಬೆಳೆಯಲಾಗಿದೆ. ಆದರೆ ಈಗಾಗಲೇ ಚೆಂಡು ಹೂವಿನ ಬೆಳೆ ಕಟಾವಿಗೆ ಬಂದು 15 ದಿನ ಕಳೆದರೂ ಮಾರುಕಟ್ಟೆಯಲ್ಲಿಕೇಳುವವರಿಲ್ಲ, ಮಾರುಕಟ್ಟೆಗೆ ಹೋದರೆ ಕೆಜಿಗೆ 10 ರೂ. ನೀಡುತ್ತೇವೆ ಎಂದು ಹೇಳುತ್ತಾರೆ.
PM Kisan Yojana: ರೈತರ ಸಂಜೀವಿನಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ: ವರ್ಷಕ್ಕೆ 6,000 ರೂ. ಧನಸಹಾಯ
ತಾಲ್ಲೂಕಿನ ಸಬ್ಮಂಗಲ, ಗುಡ್ಡನಹಳ್ಳಿ, ರಾಜಾಪುರ, ಕರ್ಪೂರು, ಭಕ್ತಿಪುರ, ಮಾಯಸಂದ್ರ ಹಾಗೂ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಕೊಮಾರನಹಳ್ಳಿ, ಸೆಕೆಂಡ್ ಮದ್ರಾಸ್, ಪೂನಹಳ್ಳಿ ಭಾಗಗಳಲ್ಲಿ ಹೆಚ್ಚು ಸೇವಂತಿ ಬೆಳೆಯಲಾಗುತ್ತದೆ. ಉತ್ತಮ ಫಸಲು ಬಂದರೂ, ಹೂ ಬೇಡಿಕೆ ಕಳೆದುಕೊಂಡಿತು.
ರೈತರು ಬೆಳೆದ ಚೆಂಡು ಹೂವಿಗೆ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲ. ಆದ್ದರಿಂದ ಚೆಂಡು ಹೂವು ಮತ್ತು ಇತರೆ ಹೂವು ಬೆಳೆದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು, ಇಲ್ಲವೇ ಸೂಕ್ತ ಬೆಂಬಲ ಬೆಲೆ ಒದಗಿಸಬೇಕು. ರೈತರು ನಷ್ಟ ಅನುಭವಿಸಿದರೆ, ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಚೆಂಡು ಹೂವು ಬೆಳೆದ ರೈತರ ನೆರವಿಗೆ ಬರಬೇಕು ಎಂದು ಬೆಳೆಗಾರರು,
ಮಾರುಕಟ್ಟೆಗೆ ಹೂ ತೆಗೆದುಕೊಂಡು ಹೋದರೂ ಬಂಡವಾಳ ಸಿಗುತ್ತಿಲ್ಲ. ಹೀಗಾಗಿ ಹೂ ಕಟಾವು ಕೂಲಿ, ಸಾಗಣೆ ವೆಚ್ಚ ಮಾಡಿ ಕೈ ಸುಟ್ಟುಕೊಳ್ಳುವ ಬದಲು ತೋಟದಲ್ಲೇ ಬಿಟ್ಟರೆ ಗೊಬ್ಬರ ಆಗುತ್ತದೆ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.