ದಾವಣಗೆರೆ: ಜಿಲ್ಲೆಯಲ್ಲಿ ರೈತರು ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ಈಗಾಗಲೇ ಶೇಕಡ 20 ರಷ್ಟು ಕೊಯ್ಲಿಗೆ ಬಂದಿದ್ದು, ಕಟಾವು ಕಾರ್ಯ ಪ್ರಾರಂಭವಾಗಿದೆ. ಇನ್ನುಳಿದ ಶೇಕಡ 50 ರಷ್ಟು ಭತ್ತದ ಬೆಳೆ ಇನ್ನು ಎಂಟೇತ್ತು ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಆದರೆ ಇನ್ನುಳಿದ ಶೇಕಡ 30 ರಷ್ಟು ಭತ್ತದ ಬೆಳೆ ಕಾಳು ಕಟ್ಟುವ ಅಂತದಲ್ಲಿದೆ.
ಈ ಬೆಳೆ ಈ ತಿಂಗಳ ಅಂತ್ಯಕ್ಕೆ ಕೊಯ್ಲಿಗೆ ಬರುತ್ತದೆ. ಈ ಬೆಳೆ ಕಾಳು ಕಟ್ಟುವ ಅಂತದಲ್ಲಿದಿರುವುದರಿಂದ ನಿತ್ಯ ನೀರು ಬೇಡುತ್ತದೆ. ಇಲ್ಲವಾದರೆ ಕಾಳು ಸಂಪೂರ್ಣ ಜಲ್ಲಾಗುತ್ತದೆ. ಇದರಿಂದ ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಆದ್ದರಿಂದ ಈ ತಿಂಗಳ ಅಂತ್ಯದವರೆಗೆ ಭದ್ರಾ ನೀರು ಹರಿಸಬೇಕು ಎಂದು ಒತ್ತಾಯಿಸುತ್ತೇವೆ.
ಈಗಾಗಲೇ ಭತ್ತದ ಪೈರು ಕೊಯ್ಲಿಗೆ ಬಂದಿರುವುದನ್ನು ಬಿಟ್ಟು ಕಾಳು ಕಟ್ಟುವ ಅಂತದಲ್ಲಿರುವ ಪೈರಿಗೆ ಮಾತ್ರ ನೀರು ಒದಗಿಸುವ ಕಾರ್ಯವಾಗಬೇಕು.ಪ್ರಸ್ತುತ ಈಗಾಗಲೇ ಕೊಯ್ಲಿಗೆ ಬಂದಿರುವ ಭಾಗಕ್ಕೂ ನೀರು ನಿರಂತರವಾಗಿ ಹರಿಸಲಾಗುತ್ತಿದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳು ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನೀರಿನ ಅವಶ್ಯಕತೆ ಇರುವ ಭಾಗಕ್ಕೆ ಮಾತ್ರ ನೀರು ಹರಿಸಬೇಕು. ಇಲ್ಲವಾದರೆ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತದೆ.
ಇಂದು ರಾತ್ರಿ ನೀರು ನಿಲುಗಡೆ ಮಾಡಲಾಗುವುದು ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದಿನಿಂದಲೇ ನೀರು ನಿಲುಗಡೆ ಮಾಡಿದ್ರೆ ಕಾಳು ಕಟ್ಟುವ ಅಂತದಲ್ಲಿರುವ ಶೇಕಡ 30ರಷ್ಟು ಭತ್ತದ ಬೆಳೆ ಹಾನಿಯಾಗುತ್ತದೆ. ಆದ್ದರಿಂದ ಇಂದು ನೀರು ನಿಲುಗಡೆ ಮಾಡದೆ, ಈ ತಿಂಗಳ ಅಂತ್ಯದವರೆಗೆ ಕಾಳು ಕಟ್ಟುವ ಅಂತದಲ್ಲಿರುವ ಶೇಕಡ 30 ರಷ್ಟು ಭತ್ತದ ಬೆಳೆಗೆ ಮಾತ್ರ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಕೋರಿದೆ.
ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು, ಕೊಳೇನಹಳ್ಳಿ ಬಿ ಎಂ ಸತೀಶ್, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಮತ್ತು ಮಾಜಿ ಎಪಿಎಂಸಿ ಅಧ್ಯಕ್ಷ, ರೈತ ಮುಖಂಡರಾದ ಆಲೂರು ನಿಂಗರಾಜ್, ಅಣಜಿ ಗುಡ್ಡೇಶ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಕೆ ಎಸ್ ಮೋಹನ್, ಕೊಂಡಜ್ಜಿ ಪರಮೇಶ್ವರಪ್ಪ ಮುದೇಗೌಡ್ರ ಮುಂತಾದವರು ಉಪಸ್ಥಿತರಿದ್ದರು.