ಮಂಡ್ಯ:- ಕೃಷಿ ಕುಟುಂಬಗಳ ಹಿನ್ನೆಲೆಯುಳ್ಳ ಶಿಕ್ಷಕರ ಗುಂಪೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ರೈತರಿಗಾಗಿ ‘ರೈತರ ಶಾಲೆ’ಯೊಂದನ್ನು ಆರಂಭಿಸಲು ಮುಂದಾಗಿದ್ದಾರೆ.
ಬೆಂಗಳೂರು: ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡ್ತಿದ್ದ ವಿದೇಶಿ ಪೆಡ್ಲರ್ಸ್ ಅರೆಸ್ಟ್!
ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ರೈತರು ಎದುರಿಸಿದ ಕಷ್ಟಗಳು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ರೈತರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ತೆರೆಯಲು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ತಂಡ ನಿರ್ಧರಿಸಿದೆ. ಈ ತಂಡದಲ್ಲಿ ರೈತ ಕುಟುಂಬದಿಂದ ಬಂದ ಶಿಕ್ಷಕರೇ ಇದ್ದಾರೆ.
ಕೃಷಿ ಮಾಡಿ ಜೀವನ ನಡೆಸುವವರ ಸಮಸ್ಯೆಗಳ ಪರಿಹಾರಕ್ಕಾಗಿ ರೈತರಿಂದಲೇ ರೈತರಿಗಾಗಿ ‘ರೈತರ ಶಾಲೆ’ಯೊಂದನ್ನು ಆರಂಭಿಸಲು ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಉಪನ್ಯಾಸಕರೊಬ್ಬರು ಮುಂದಾಗಿದ್ದಾರೆ. ಅವರಿಗೆ ಕೃಷಿ ಕುಟುಂಬಗಳ ಹಿನ್ನೆಲೆಯುಳ್ಳ ಶಿಕ್ಷಕರ ಗುಂಪು ಸಾಥ್ ನೀಡಲು ಮುಂದೆ ಬಂದಿದೆ.
ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಮತ್ತು ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿಯೂ ಈ ತಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ವಿಚಾರಗಳಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ತಂಡದ ಹಾಗೂ ಅವರ ಶಾಲೆಯ ಉದ್ದೇಶವಾಗಿದೆ.
ರೈತರಿಗೆ ಶಿಕ್ಷಣ ನೀಡುವುದರ ಜತೆಗೆ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿಗಳು ಮತ್ತು ತಜ್ಞರಿಂದ ‘ರೈತರ ಶಾಲೆ’ಯಲ್ಲಿ ವಿಚಾರ ಮಂಡನೆ ಕಾರ್ಯಕ್ರಮಗಳನ್ನು ಆಯೋಜಿಸಲು ತಂಡವು ನಿರ್ಧರಿಸಿದೆ.