ಹುಬ್ಬಳ್ಳಿ : ಇಬ್ರಾಹಿಮಪೂರ ಗ್ರಾಮ ಪಂಚಾಯತ್ ನಲ್ಲಿ ಬಿಲ್ ಕಲೆಕ್ಟರ್ ಆಗಿ ಸುದೀರ್ಘ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವಾಜಿ ಜಾಧವ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಪ್ರಭಾವತಿ ಜೋಗಿ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಲ್ಲವ್ವ ದೊಡ್ಡಮನಿ ಮಾತನಾಡಿ ಶಿವಾಜಿ ಜಾದವ ಅವರು ಇಡೀ ಗ್ರಾಮದ ಪರಿಚಯ ಇರುವಂತವರು. ಇವರ ಕೆಲಸ ಕಾರ್ಯಗಳು ಕಿರಿಯರಿಗೆ ಮಾದರಿ ಹಾಗೂ ಮಿತಭಾಷಿ, ಸೌಮ್ಯಸ್ವಭಾವದವರು.ಎಲ್ಲರೊಂದಿಗೆ ಸ್ಪಂದಿಸುವ ಸ್ವಭಾವ ಇವರದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ PDO ಆನಂದ ಕೆಂಚಣ್ಣವರ ಅಶೋಕ್ ಲಟಗೆರಿ ಯಲ್ಲಪ್ಪ ಗೊಡಕೆರ ಸಿದ್ದಪ್ಪ ದೊಡ್ಡಮನಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು, ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು