ಇಂದು ಬಿಗ್ಬಾಸ್ 11ರ ಸೀಸನ್ಗೆ ಚಾಲನೆ ಸಿಕ್ಕಿದೆ. ಸದ್ಯ ನಡೆಯುತ್ತಿರೋ ಬಿಗ್ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಹೊಸ ಲುಕ್ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚನ ನಯಾ ಖದರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಿಚ್ಚ ಧರಿಸೋ ಒಂದೊಂದು ಕಾಸ್ಟ್ಯೂಮ್ ಲಕ್ಷಾಂತರ ರೂ. ಇರಲಿದೆ ಎಂದು ಹೇಳಲಾಗುತ್ತಿದೆ.
ಮಹಾಲಕ್ಷ್ಮಿ ಕೊಲೆ ಕೇಸ್ – ಹತ್ಯೆ ಬಳಿಕ ಹಂತಕ ಬಹಳ ಪಶ್ಚಾತ್ತಾಪ ಪಟ್ಟಿದ್ನಂತೆ!
ಇನ್ನೂ ಬಹುನಿರೀಕ್ಷಿತ ಕನ್ನಡ ಬಿಗ್ಬಾಸ್ ಸೀಸನ್ 11 ಇಂದಿನಿಂದ ಶುರುವಾಗಿದೆ. ಬಹುತೇಕ ಎಲ್ಲಾ ಸ್ಪರ್ಧಿಗಳ ಹೆಸರು ರಿವೀಲ್ ಆಗಿದ್ದು, ಒಬ್ಬೊಬ್ಬರೇ ಎಂಟ್ರಿ ಕೊಡುತ್ತಿದ್ದಾರೆ. ಪ್ರತಿ ಸೀಸನ್ನಲ್ಲೂ ಹೈಲೆಟ್ ಎಂದರೆ ಕಿಚ್ಚ ಸುದೀಪ್ ನಯಾ ಹೇರ್ ಸ್ಟೈಲ್ ಮತ್ತು ಸ್ಟೈಲೀಶ್ ಉಡುಗೆ. ಈ ಬಾರಿ ಕೂಡ ಸುದೀಪ್ ಡ್ರೆಸ್ ಸ್ಟೈಲ್ನದ್ದೇ ಎಲ್ಲೆಡೆ ಚರ್ಚೆ.
ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಸುದೀಪ್ ಅವರಿಗಾಗಿ ಕೆಲಸ ಮಾಡುತ್ತಾರಂತೆ.