ದಕ್ಷಿಣದ ಬಹುತೇಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ, ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ (Brahmanandam) ಅವರ ಜೀವನ ಕುರಿತಾದ ಪುಸ್ತಕ ಬಿಡುಗಡೆಯಾಗಿದೆ. ಈ ಪುಸ್ತಕಕ್ಕೆ ‘ನೇನು’ (Nenu) ಎಂದು ಹೆಸರಿಡಲಾಗಿದ್ದು, ಈ ಪುಸ್ತಕಗಳನ್ನು ಖ್ಯಾತನಟ ಚಿರಂಜೀವಿ ಸೇರಿದಂತೆ ಹಲವರಿಗೆ ಸ್ವತಃ ಬ್ರಹ್ಮಾನಂದಂ ಅವರೇ ನೀಡಿದ್ದಾರೆ.
ಸಾವಿರಾರು ಚಿತ್ರಗಳಲ್ಲಿ ನಟಿಸಿದ ಬ್ರಹ್ಮಾನಂದಂ ಅವರ ಜೀವನ ಬಲು ರೋಚಕವಾದದ್ದು. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಹಾಸ್ಯ ಕಲಾವಿದರಲ್ಲಿ ಮೇರುನಟರಾಗಿ ಗುರುತಿಸಿಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏರಿಳಿತವನ್ನೂ ಕಂಡವರು. ಹಾಗಾಗಿ ಸಹಜವಾಗಿ ಪುಸ್ತಕದ ಬಗ್ಗೆ ಕುತೂಹಲ ಮೂಡಿದೆ.
ಮೊನ್ನೆಯಷ್ಟೇ ಮೆಗಾಸ್ಟಾರ್ ಚಿರಂಜೀವಿ (Chiranjeevi) ಮತ್ತು ಅವರ ಪುತ್ರ ರಾಮ್ ಚರಣ್ ಭೇಟಿ ಮಾಡಿರುವ ಬ್ರಹ್ಮಾನಂದ ತಮ್ಮ ಬಯೋಗ್ರಫಿ ಪುಸ್ತಕವನ್ನು (book) ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.