ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜ ನಿಧನ ಹೊಂದಿದ್ದಾರೆ. ಅನಾರೋಗ್ಯ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ 7.50ಕ್ಕೆ ನಿಧನರಾದರು.
ಗ್ಯಾರಂಟಿ ಯೋಜನೆಗೆ ನನ್ನ ವಿರೋಧವಿಲ್ಲ, ದಯವಿಟ್ಟು ನಿಲ್ಲಿಸಬೇಡಿ: HD ಕುಮಾರಸ್ವಾಮಿ!
ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತೀವ್ರ ನಷ್ಟಉಂಟಾಗಿದೆ. ಗಣ್ಯರ ಅಗಲಿಕೆಗೆ ಹಲವರು ಸಂತಾಪ ಸೂಚಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ನಾ.ಡಿಸೋಜ ಅವರ ಪುತ್ರ ನವೀನ್ ನಾ.ಡಿಸೋಜ ತಿಳಿಸಿದ್ದಾರೆ.
ಡಿಸೋಜರವರು ಈವರೆಗೆ 37 ಕಾದಂಬರಿಗಳು, ನಾಲ್ಕು ನಾಟಕಗಳು, ಇಪ್ಪತ್ತೆಂಟು ಮಕ್ಕಳ ಕೃತಿಗಳು ಸೇರಿದಂತೆ ನೂರಾರು ಕತೆಗಳನ್ನು ಬರೆದಿದ್ದಾರೆ.
ಇವರ ಕಾದಂಬರಿ ‘ಕಾಡಿನ ಬೆಂಕಿ’ ಹಾಗೂ ‘ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ ‘ಸ್ವರ್ಣಕಮಲ’ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಬಳುವಳಿ’ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ. ‘ಸಾರ್ಕ್’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು.