ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಕುಮಾರ್ ಶಹಾನಿ (Kumar Shahani) ಅವರು 83ನೇ ವರ್ಷಕ್ಕೆ ವಿಧಿವಶರಾಗಿದ್ದಾರೆ. ಫೆ.24ರ ರಾತ್ರಿ 11 ಗಂಟೆಗೆ ಕೊಲ್ಕತ್ತಾದಲ್ಲಿ ಕೊನೆಯುಸಿರೆಳೆದರು. ಕುಮಾರ್ ಶಹಾನಿ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಆಪ್ತರು ಕಂಬನಿ ಮಿಡಿದಿದ್ದಾರೆ.
ಕೆಲದಿನಗಳಿಂದ ಕುಮಾರ್ ಶಹಾನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆಗಾಗಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕುಮಾರ್ ಶಹಾನಿ ಅವರು ನಿಧನರಾಗಿದ್ದಾರೆ. ಕುಮಾರ್ ಶಹಾನಿ ನಿಧನದ ಬಗ್ಗೆ ಅವರ ಕುಟುಂಬದ ಆಪ್ತರಾದ ಮಿತಾ ವಸಿಷ್ಠ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹಣ್ಣು ಸೇವಿಸಿದ್ರೆ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಲ್ವಂತೆ!
ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕುಮಾರ್ ಶಹಾನಿ ಅವರು ಕಳೆದ 6 ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಯ ದರ್ಪಣ್, ತರಂಗ್, ಖಯಾಲ್ ಗಥಾ, ಚಾರ್ ಅಧ್ಯಾಯ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.