ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರ ಮನೆಯಲ್ಲಿ ಕಳ್ಳತನವಾಗಿದ್ದು, ಈ ಬಗ್ಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ. 31 -12-2023 ರ ಮದ್ಯಾಹ್ನ ನ ಬೀರುವಿನಲ್ಲಿ ಕಸ್ತೂರಿ ಶೆಟ್ಟಿ 2.05 ಲಕ್ಷ ಹಣ ಇಟ್ಟಿದ್ರಂತೆ. ಜನವರಿ 5ರಂದು ಬೀರು ಚೆಕ್ ಮಾಡಿದಾಗ ಹಣ ಇರಲಿಲ್ಲ. ಎರಡು ದಿನಗಳ ಕಾಲ ಮನೆಯಲ್ಲೆಲ್ಲಾ ಹುಡುಕಾಡಿದ್ರು ಹಣ ಸಿಕ್ಕಿಲ್ಲ.
ಕಳೆದ ಡಿಸೆಂಬರ್ 31ರಂದು ಮಧ್ಯಾಹ್ನ ತಮ್ಮ ರೂಂನ ಬೀರುವಿನಲ್ಲಿಟ್ಟಿದ್ದ 2.50 ಲಕ್ಷ ರೂ.ಗಳನ್ನು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಇಟ್ಟಿದ್ದರು. ಆದ್ರೆ ಜನವರಿ 5ರಂದು ಹಣ ಕಳ್ಳತನವಾಗಿದೆ. ಎರಡು ದಿನಗಳ ಕಾಲ ಕುಟುಂಬಸ್ಥರು ಮನೆಯೆಲ್ಲ ಹುಡುಕಾಡಿದ್ದಾರೆ.
ಹೀಗಾಗಿಜನವರಿ 7ರಂದು ಚಂದ್ರಲೇಔಟ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀದ್ದಾರೆ. ಕಳೆದ ಆರು ತಿಂಗಳಿಂದ ರತ್ನಮ್ಮ ಎಂಬುವರು ಮನೆ ಕೆಲಸಕ್ಕೆ ಬರ್ತಿದ್ದಾರೆ. ರೂಂಗೆ ರತ್ನಮ್ಮ ಬಿಟ್ಟು ಬೇರೆ ಯಾರೂ ಕೂಡ ಬಂದಿಲ್ಲ ಮನೆ ಕೆಲಸದಾಕೆ ರತ್ನಮ್ಮಳೇ ಹಣ ಕದ್ದಿರಬಹುದು ಅಂತಾ ಕಸ್ತೂರಿ ದೂರು ನೀಡಿದ್ದಾರೆ.
ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಮನೆ ಕೆಲಸದವರ ಮೇಲೆ ಕಸ್ತೂರಿ ಶೆಟ್ಟಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ, ಸದ್ಯ ಮನೆ ಕೆಲಸದಾಕೆ ರತ್ನಮ್ಮ ಅವರನ್ನು ವಿಚಾರಣೆ ನಡೆಸಿರುವ ಚಂದ್ರಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ