ಬೆಂಗಳೂರು:–ಕನ್ನಡ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ 67 ವರ್ಷದ ಎಸ್ಕೆ ಜೈನ್ ನಿಧನ ಹೊಂದಿದ್ದಾರೆ.
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿಷಿ ಎಸ್ಕೆ ಜೈನ್ ಇಂದು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸೆರೆಳೆದಿದ್ದಾರೆ.
IPL 2024: ವಾಂಖೆಡೆಯಲ್ಲಿ RCB ವಿರುದ್ಧ ಹಿಸ್ಟರಿ ಬರೆದ ಹಿಟ್ಮ್ಯಾನ್!
ಮಾಧ್ಯಮದ ಮೂಲಕ ಜ್ಯೋತಿಷಿ ಪರಂಪರೆಯನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಎಸ್ಕೆ ಜೈನ್ಗೆ ಸಲ್ಲುತ್ತದೆ. ಮಾಧ್ಯಮಗಳಲ್ಲಿ ಜ್ಯೋತಿಷಿ ಕಾರ್ಯಕ್ರಮ ನಡೆಸಿ ಕರ್ನಾಟಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಎಸ್ಕೆ ಜೈನ್ ರಾಶಿ ಭವಿಷ್ಯ, ಶುಭ-ಅಶುಭ, ಫಲಾಫಲ ಸೇರಿದಂತೆ ಜ್ಯೋತಿಷ್ಯದ ಪರಿಕರಗಳಲ್ಲಿ ನಿಖರತೆಯನ್ನು ತಂದುಕೊಟ್ಟಿದ್ದರು. ವಿದ್ಯುನ್ಮಾನ ಮಾಧ್ಯಮದಲ್ಲಿ ಜ್ಯೋತಿಷಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕರ್ನಾಟಕದಲ್ಲಿ ಹೊಸ ಪರಂಪರೆ ಹಾಗೂ ಜ್ಯೋತಿಷ್ಯವನ್ನ ಪಸರಿಸಿದ ಖ್ಯಾತಿಗೆ ಜೈನ್ ಪಾತ್ರರಾಗಿದ್ದರು.