ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶ, ವಿದೇಶದ ಮಂದಿ ಕೂಡ ಕುಂಭ ಮೇಳದಲ್ಲಿ ಭಾಗಿಯಾಗಿ ಗಂಗಾ ಸ್ನಾನ ಮಾಡುತ್ತಿದ್ದಾರೆ. ಮೌನಿ ಅಮಾವಾಸ್ಯೆಯ ದಿನ 7.6 ಕೋಟಿ ಭಕ್ತರು ಅಮೃತಸ್ನಾನ ಮಾಡಿದ್ದಾರೆ. ಇದೀಗ ಆ ಬಳಿಕವು ಕೋಟಿ ಕೋಟಿ ಜನ ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದು ಪುಣ್ಯಸ್ನಾನ ಮಾಡುತ್ತಿದ್ದಾರೆ.
ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದ ನಟಿ ಶ್ರೀನಿಧಿ ಶೆಟ್ಟಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ. ಜೊತೆಗೆ ಆ ದಿನದ ಒಂದಷ್ಟು ಅನುಭವಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೋಟಿ ಗಟ್ಟಲೆ ಜನರ ಮಧ್ಯೆ ಶ್ರೀನಿಧಿ ಶೆಟ್ಟಿ ಮಾಸ್ಕ್ ಹಾಕಿಕೊಂಡು ಓಡಾಡಿದ್ದಾರೆ. ಜೊತೆಗೆ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪುನೀತರಾಗಿದ್ದಾರೆ. ಕುಂಭಮೇಳದ ವಿಡಿಯೋವನ್ನ ಶ್ರೀನಿಧಿ ಶೆಟ್ಟಿ ಶೇರ್ ಮಾಡಿದ್ದಾರೆ.
ನಾನು ಕುಂಭಮೇಳಕ್ಕೆ ಬರ್ತಿನಿ ಅಂತ ಅಂದುಕೊಂಡಿರಲಿಲ್ಲ. ಇಲ್ಲಿಗೆ ಬಂದ್ಮೇಲೆ ವಿಶೇಷ ಅನುಭವ ಪಡೆಯುತ್ತೇನೆ ಅನ್ನುವ ಫೀಲ್ ಕೂಡ ಇರಲಿಲ್ಲ. ಆದರೆ, ಇಲ್ಲಿಗೆ ಬಂದ್ಮೇಲೆ ಎಲ್ಲವೂ ಸಾಧ್ಯವಾಗಿದೆ. ಮೊನ್ನೆ ಮೌನಿ ಅಮವಾಸ್ಯೆ ದಿನವೇ ಪ್ರಯಾಗ್ ರಾಜ್ಗೆ ಹೋಗಿದ್ದೆ. ನಿಜಕ್ಕೂ ಇದೊಂದು ಒಳ್ಳೆ ಅನುಭವವೇ ಆಗಿದೆ. ಹಾಗೆ ಇಲ್ಲಿಗೆ ಬಂದ ಮೇಲೆ ವಿಶೇಷ ಅನುಭವ ಆಗಿದೆ. ಪವಿತ್ರ ದೈವಿ ಶಕ್ತಿಗಳ ಆಶೀರ್ವಾದಗಳು ಸದಾ ನನ್ನ ಮೇಲೆ ಇದ್ದೇ ಇರುತ್ತದೆ ಅನ್ನುವ ಭಾವನೆ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ.