ಬೆಂಗಳೂರು:– ಬಿಜೆಪಿಯದ್ದು ಕುಟುಂಬ ರಾಜಕಾರಣ ಎನ್ನುವ ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಜಯೇಂದ್ರ ಅವರಿಗೆ ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ನೀಡಿದ್ದಾರೆ. ಅದನ್ನು ಅವರು ನಿಭಾಯಿಸುತ್ತಾರೆ. ಇದನ್ನು ಸಹಿಸಲಾಗದೆ ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್ ನ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡ್ತಾರೆ. ಆದರೆ ಅವರಿಗೆ ಟೀಕೆ ಮಾಡುವ ನೈತಿಕ ಹಕ್ಕು ಇಲ್ಲ. ನೆಹರು ಇಂದ ಹಿಡಿದು ರಾಹುಲ್ಗಾಂದಿವರೆಗೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸದ, ತಮ್ಮ ನಾಯಕರ ಕುಟುಂಬ ರಾಜಕಾರಣ ಬಗ್ಗೆ ಸೊಲ್ಲೆತ್ತದೆ ವಿಜಯೇಂದ್ರರ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದವರು ವಿಜಯೇಂದ್ರ. ಹಿಂದಿನಿಂದಲೂ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಈಗ ಕೊಟ್ಟಿರುವ ಜವಾಬ್ದಾರಿ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ಕೊಟ್ಟಿಲ್ಲ. ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಪುತ್ರ ಎಂದು ನಿಮಗೆ ಸಚಿವ ಸ್ಥಾನ ನೀಡಿದ್ದಾರೆ ಅಷ್ಟೇ, ಬಂಗಾರಪ್ಪನ ಪುತ್ರ ಮಧು ಬಂಗಾರಪ್ಪ ಗೆ, ಗುಂಡುರಾವ್ ಪುತ್ರ ದಿನೇಶ್ ಗುಂಡುರಾವ್ ಗೆ ಸಚಿವ ಕೊಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇದೆ ಬಿಜೆಪಿಯಲ್ಲಿ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಬೇಕು ಎಂಬುದುದು ಕಾರ್ಯಕರ್ತರ ಧ್ವನಿಯಾಗಿತ್ತು. ಅದಕ್ಕೆ ನಾನು ಕೂಡ ಅವರ ಅಭಿಪ್ರಾಯ ತಿಳಿಸಿದ್ದೇ, ನನ್ನಿಂದಲೇ ಆಗಿದ್ದು ಎನ್ನುವುದು ತಪ್ಪಾಗುತ್ತೆ. ಮೋದಿಯವರು ಮತ್ತೆ ಪ್ರಧಾನಿಯಾಗಲು ಇಲ್ಲಿ ಸಮರ್ಥ ನಾಯಕ ಬೇಕಿತ್ತು. ಹೀಗಾಗಿ ವಿಜಯೇಂದ್ರರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.