ಬೆಂಗಳೂರು:- ಅವ್ರಿಬ್ರಿಗೂ ಮದುವೆಯಾಗಿ ಒಂಭತ್ತು ವರ್ಷಗಳ ಆಗಿತ್ತು.. ಜಗಳ ಆಡಿ ಹೆಡತೀ ತಾಯಿ ಮನೆಯಲ್ಲಿ ಇದ್ದರು . ಆದ್ರೂ ಗಂಡನ ಕಾಟ ಮಾತ್ರ ತಪ್ಪಿರಲಿಲ್ಲ.. ಒಂದಿನ ಕೊಲೆ ಮಾಡ್ತೀನಿ ಅಂತ್ಲೇ ವರ್ನಿಗ್ ಕೊಟ್ಟು ತಿರುಗಾಡ್ತಿದ್ದವ ಕೊನೆಗೂ ಹೆಡತೀ ಯಾನ ಕೊಂದಿದ್ದಾನೆ.. ಬೆಳ್ ಬೆಳಿಗ್ಗೆಯೇ ಪತ್ನಿ ಜೊತೆ ಜಗಳ ಮಾಡಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯಗೈದಿದ್ದಾನೆ..
Arrest: ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿದ್ದ ಖದೀಮರ ಗ್ಯಾಂಗ್ ಅಂದರ್!
ಹೌದು.. ಗಂಡನಿಂದಲೇ ಹೆಂಡತಿಯ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಇಂದು ಬೆಳಗ್ಗೆ ಎಂಟುಗಂಟೆ ಸುಮಾರಿಗೆ ಏಕಾ ಏಕಿ ಪತ್ನಿ ಮನೆಗೆ ಬಂದಿದ್ದ.. ಕೌಟುಂಬಿಕ ವಿಚಾರಕ್ಕೆ ಜಗಳ ತೆಗೆದು ರಂಪಾಟ ಮಾಡಿದ್ದ.. ಜಗಳದಲ್ಲೇ ಒಂದು ಹೆಜ್ಜೆ ಮುಂದಿಟ್ಟಿದ್ದ ಆರೋಪಿ ತಬ್ರೇಜ್ ಪಾಷ ಎಂಬಾತ ತನ್ನ ಪತ್ನಿ ಫಾತಿಮಾಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ..
ಅಂದ್ಹಾಗೆ ಕೊಲೆಗೆ ಕಾರಣ ಬೇರೇನೂ ಅಲ್ಲ.. ಗಂಡ ಹೆಂಡತಿ ಜಗಳ ಅಷ್ಟೇ.. 34ವರ್ಷದ ಫಾತಿಮಾಳನ್ನ ಒಂಭತ್ತು ವರ್ಷಗಳ ಹಿಂದೆ ತಬ್ರೇಜ್ ಪಾಷಾ ಮದುವೆಯಾಗಿದ್ದ.. ಎರಡು ಮಕ್ಕಳು.. ಸಣ್ಣ ಪುಟ್ಟ ಕೆಲಸಗಳು ಸಂಸಾರ ಚೆನ್ನಾಗಿಯೇ ನಡೀತಿತ್ತು.. ಆದ್ರೆ ಅದಾಗಲೇ ಆರೋಪಿ ತಬ್ರೇಜ್ ಪಾಷ ದಾರಿ ತಪ್ಪಿದ್ದ.. ಕಳ್ಳತನ.. ಗಾಂಜಾ ಸೇದೋದು.. ಕುಡಿಯೋದು.. ಸೇರಿ ಒಂದಷ್ಟು ಚಟಕ್ಕೆ ಬಿದ್ದಿದ್ದ.. ನಂತರ ಪತ್ನಿ ಜೊತೆ ಬಂದು ಪ್ರತೀ ದಿನ ಜಗಳ ಆಡೋದು ಮಾಡ್ತಿದ್ದ.. ತಬ್ರೇಜ್ ಪಾಷನ ಕಾಟಕ್ಕೆ ಬೇಸತ್ತಿದ್ದ ಫಾತಿಮಾ ಕೊನೆಗೆ ಆತನನ್ನ ಬಿಟ್ಟು ತವರು ಮನೆಗೆ ಬಂದಿದ್ಳು.. ಎರಡು ಮಕ್ಕಳ ಹಾಗೂ ತಾಯಿಯ ಜೊತೆ ವಾಸಿಸ್ತಿದ್ಳು.. ಐದು ವರ್ಷಗಳಿಂದ ದೂರು ಇದ್ರೂ ಆಗಾಗ ಬಂದು ಜಗಳ ಮಾಡ್ತಿದ್ದ.. ಇತ್ತೀಚೆಗೆ ಕೂಡ ಪತ್ನಿ ಜೊತೆ ಜಗಳ ತೆಗೆದಿದ್ದಾತ ಆಕೆಯನ್ನ ಕೊಲೆ ಮಾಡ್ತೀನಿ ಅಂತಾ ಹೇಳಿ ಹೋಗಿದ್ನಂತೆ.. ಇಂದು ಬೆಳಗ್ಗೆ ಸೀದಾ ಮನೆಗೆ ಬಂದವನೇ ಜಗಳ ತೆಗೆದು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ..
ಆರೋಪಿಯಿಂದ ಮೊದಲೇ ಕಂಟಕ ಇರೋದು ಗೊತ್ತಾಗಿ ಫಾತಿಮಾ ತಾಯಿ ಅಲರ್ಟ್ ಆಗಿದ್ಳು.. ಸಂಬಂಧಿಕರ ಜೊತೆ ಮಾತಾಡಿ ಡಿವೋರ್ಸ್ ಕೊಡಿಸೋಕು ಪ್ರಯತ್ನ ಮಾಡಿದ್ಳು.. ಆದ್ರೂ ಬಿಡದ ಆರೋಪೊ ತಬ್ರೇಜ್ ಫಾತಿಮಾಳನ್ನ ಕೊಲೆ ಮಾಡಿಯೇ ತೀರ್ತೀನಿ ಅಂತಾ ಡಿಸೈಡ್ ಆಗಿದ್ದ.. ಆತ ಏನಾದ್ರು ಮಾಡ್ಬೋದು ಅಂತಾ ಫಾತಿಮಾ ತಾಯಿ ಮನೆಗೆ ಸಿಸಿಟಿವಿ ಅಳವಡಿಸಿದ್ರಂತೆ.. ಇಂದು ಬೆಳಗ್ಗೆ ಬಂದು ಜಗಳ ತೆಗೆದಾಗ ವ್ಹೀಲ್ ಚೇರ್ ನಲ್ಲಿ ಕೂತಿದ್ದ ತಾಯಿ ಅಸಾಯಕತೆಯಿಂದ ಕೂಗಾಡುತ್ತಿದ್ಳು.. ಮಗಳನ್ನ ಬಿಟ್ಟುಬಿಡು ಅಂತಾ ಚೀರುತಿದ್ಳು.. ಆದರೂ ಬಿಡದ ಆರೋಪಿ ತಬ್ರೇಜ್ ಪಾಷ ಚಾಕುವಿನಿಂದ ತಾಯಿಯ ಮುಂದೆಯೇ ಪತ್ನಿ ಫಾತಿಮಾಳನ್ನ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದಾನೆ.
ಇನ್ನು ವಿಚಾರ ಗೊತ್ತಾದ ಕೂಡಲೇ ಘಟನಾ ಸ್ಥಳಕ್ಕೆ ಬಂದಿದ್ದ ಚಾಮರಾಜಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.. ತನಿಖೆ ವೇಳೆ ಆತನ ಮೇಲೆ ಒಂದಷ್ಟು ಕೇಸ್ ಗಳು ಇರೋದು ಗೊತ್ತಾಗಿದೆ.. ಸದ್ಯ ಕೊಲೆ ಕೇಸ್ ಸಂಬಂಧ ಆರೋಪಿ ತಬ್ರೇಜ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ..