ಬೆಂಗಳೂರು: ಅವನು ವ್ಯಾಸಂಗ ಮಾಡಿದ್ದು ಕೇವಲ 10ನೇ ತರಗತಿ.. ಆಗಿದ್ದು ಲೋಕಾಯುಕ್ತ ಅಧಿಕಾರಿ.. ಆಫೀಸರ್ ಆಗಲುಕಾರಣವಾಗಿದ್ದು ಸಿನಿಮಾ.. ಸಿನಿಮಾ ನೋಡಿ ಮಾಸ್ಟರ್ ಪ್ಲಾನ್ ಮಾಡಿದವನೇ ಹಣ ಮಾಡೋಕೆ ಶುರುವಿಟ್ಟುಕೊಂಡಿದ್ದ.. ಹಣ ಮಾಡು.. ಮಜಾ ಮಾಡು ಎನ್ನುತ್ತಿದ್ದವನ ಐನಾತಿ ಸ್ಟೋರಿ ಇಲ್ಲಿದೆ..
ಸಿನಿಮಾ ಸ್ಟೈಲ್ ನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವಂಚನೆ ಮಾಡ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಈ ಫೋಟೋದಲ್ಲಿದಾನಲ್ಲ ಇವ್ನೇ ನೋಡಿ ಆ ಖತರ್ನಾಕ್.. ಹೆಸ್ರು ಶ್ರೀನಾಥ್ ರೆಡ್ಡಿ.. ನೋಡೋಕೆ ಕಳ್ಳನ್ ತರ ಇದಾನೆ.. ಆದ್ರೆ ಹೇಳ್ತಿದ್ದು ಮಾತ್ರ ಲೋಕಾಯಕ್ತ ಅಧಿಕಾರಿ ಅಂತಾ.. ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಇವ ಸ್ಟೈಲಾಗಿ ಬೆದರಿಸಿ ಅವ್ರಿಂದ ಲಕ್ಷ ಲಕ್ಷ ಸುಲಿಗೆ ಮಾಡ್ತಿದ್ದ.. ಲೋಕಾಯಕ್ತ ಅಧಿಕಾರಿ ಅಂತಾ ಲಕ್ಷ ಲಕ್ಷ ಪೀಕ್ತಿದ್ದವನನ್ನ ಸಿಸಿಬಿ ಪೊಲೀಸರು ಲಾಕ್ ಅಪ್ ನಲ್ಲಿ ಹಾಕಿದ್ದಾರೆ.
Chitrasanthe: ಬೆಂಗಳೂರಲ್ಲಿ 21 ನೇ ಚಿತ್ರಸಂತೆ ಆಯೋಜನೆ : ಈ ಬಾರಿ ಏನೇಲ್ಲಾ ಇದೆ ಗೊತ್ತಾ?
ಶ್ರೀನಾಥ್ ರೆಡ್ಡಿ ಮೂಲತಃ ಆಂಧ್ರದವ್ನಾಗಿದ್ದ ಈತ ಓದಿದ್ದು 10ನೇ ತರಗತಿ.. ಈತನ ಸ್ಟೋರಿ ಮಾತ್ರ ಯಾವ ಸಿನಿಮಾಗೂ ಕಮ್ಮಿ ಇಲ್ಲ.. ಸಿನಿಮಾ ನೋಡಿಯೇ ಸಿನೆಮಾ ಸ್ಟೈಲ್ ನಲ್ಲಿ ವಂಚನೆ ಮಾಡ್ತಿದ್ದ.. ಕೆಲಸ ಇರ್ಲಿಲ್ಲ ಈತ 2007-08ರಲ್ಲಿ ಕನ್ನಾ ಕಳವು ಮಾಡ್ತಿದ್ದ.. ಆಂಧ್ರದಲ್ಲಿ ಕಳ್ಳತನ ಮಾಡಿ ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದ.. ಒಮ್ಮೆ ಜೈಲಿಗೆ ಹೋಗಿದ್ದವನಿಗೆ ಪೊಲೀಸರ ಮೇಲೆ ಭಯ ಬಂದಿತ್ತು.. ಕಳ್ಳತನ ಮಾಡ್ದೆ ಬೇರೇನಾದ್ರು ಮಾಡ್ಬೇಕು ಮಜಾ ಮಾಡ್ಬೇಕು ಅಂತಾ ತಲೆ ಕೆಡಿಸಿಕೊಂಡಿದ್ದ.. ಆಗ ಐಡಿಯಾ ಹುಡುಕೋಕೆ ಅಂತಾ ಈತ ಶುರು ಮಾಡಿದ್ದು ಸಿನಿಮಾ ನೋಡೋದನ್ನ.. ಹೀಗೆ ಕ್ರೈಂ ಸಿನಿಮಾಗಳನ್ನೇ ನೋಡ್ತಿದ್ದವನನ್ನ ಅಟ್ರ್ಯಾಕ್ ಮಾಡಿದ್ದು ತೆಲುಗಿನ ಗ್ಯಾಂಗ್ ಸಿನೆಮಾ..
ಸೂರ್ಯ, ರಮ್ಯಾ ಕೃಷ್ಣ ಅವರ ಆ್ಯಕ್ಟಿಂಗ್ ಈತನ ಮೈಂಡ್ ಚುರುಕು ಮಾಡಿತ್ತು.. ಗ್ಯಾಂಗ್ ಸಿನಿಮಾ ನೋಡ್ತಾ ನೋಡ್ತಾ ಸಿನಿಮಾದ ರೀತಿಲೇ ತಾನೂ ಫೇಕ್ ಅಧಿಕಾರಿಯಾಗಿ ಬದಲಾಗಿದ್ದ.. ಅಲ್ಲಿ ಸಿಬಿಐ ಅಂತಿದ್ರೆ ಈತ ಲೋಕಾಯಕ್ತ ಆಯ್ಕೆ ಮಾಡಿಕೊಂಡಿದ್ದ.. ಪಕ್ಕಾ ಅಫೀಸರ್ ಗಳಂತೆ ಮಾತಾಡೋ ಟ್ರೈನಪ್ ಆಗಿದ್ದವ ರ್ಯಾಂಡಮ್ ಆಗಿ ಸರ್ಕಾರಿ ಅಧಿಕಾರಿಗಳಿಗೆ ಕಾಲ್ ಮಾಡ್ತಿದ್ದ.. ಮಾಧ್ಯಮಗಳಲ್ಲಿ ಯಾವ ಅಧಿಕಾರಿ ಮನೆ ಮೇಲೆ ರೇಡ್ ಆಗಿರೋ ಸುದ್ದಿ, ಆರೋಪದ ಸುದ್ದಿ ಹೋಗಿರುತ್ತೋ ಆ ಆಫೀಸರ್ ಗಳನ್ನ ಕಾಂಟ್ಯಾಕ್ಟ್ ಮಾಡ್ತಿದ್ದ.. ಕರೆ ಮಾಡಿ ಸ್ಟೈಲಾಗಿ ಮಾತಾಡ್ತಿದ್ದವ ಹಣ ಕೊಟ್ರೆ ಕೇಸ್ ನ ಬಿ ರಿಪೋರ್ಟ್ ಹಾಕಿ ಪಾರು ಮಾಡ್ತೀನಿ ಅಂತಾ ಲಕ್ಷ ಲಕ್ಷ ಹಣ ಹಾಕಿಸಿಕೊಳ್ತಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ..
ಹೀಗೆ ಸರ್ಕಾರಿ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದವ ಆಂಧ್ರ ಕರ್ನಾಟಕದ ಸುಮಾರು 40ಜನ ಸರ್ಕಾರಿ ಅಧಿಕಾರಿಗಳಿಗೆ ವಂಚನೆ ಮಾಡಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ.. ಸುಮಾರು 60ಲಕ್ಷಕ್ಕೂ ಹೆಚ್ಚು ಹಣ ವಂಚಿಸಿ ಮಜಾ ಉಡಾಯಿಸಿದ್ದಾನಂತೆ.. ಸದ್ಯ ಆರೋಪಿಯನ್ನ ಬಂಧಿಸಿರೋ ಸಿಸಿಬಿ ಟೀಂ ಹೆಚ್ಚಿನ ತನಿಖೆ ನಡೆಸ್ತಿದೆ.