ಮಂಡ್ಯ : ಸಿಎಂ ಸಹಿಯ ನಕಲಿ ಪತ್ರ ಸೃಷ್ಟಿಸಿ ಕೋಟ್ಯಾಂತರ ರೂ ವಂಚನೆ ಪ್ರಕರಣದ ಮಾಸ್ಕರ್ ಮೈಂಡ್ ವೆಂಕಟೇಶ್ನ ಕುರಿತು ಮತಷ್ಟು ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ಪ್ರಕರಣದ ಆರೋಪಿ ವೆಂಕಟೇಶ್ ವಿರುದ್ಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮತ್ತಷ್ಟು ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿನ ಹಣ ಅಕ್ರಮ ವರ್ಗಾವಣೆ ;ಮೂವರ ವಿರುದ್ಧ ಎಫ್ಐಆರ್
ಮಂಡ್ಯದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದು, ಸಿಎಂ ಸೇರಿದಂತೆ ಅಧಿಕಾರಿಗಳ ಸಹಿಯ ನಕಲಿ ಪತ್ರ ಸೃಷ್ಟಿ ಮಾಡಿ ಯಾಮಾರಿಸುದ್ದ ವೆಂಕಟೇಶ, ಪೂರ್ವ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರೋದಾಗಿ ಹೇಳಿ, ಸರ್ಕಾರಿ ಆದೇಶಗಳ ನಕಲಿ ಪತ್ರ ಸೃಷ್ಟಿಸಿ ಸುಮಾರು 35 ರಿಂದ 40 ಜನಕ್ಕೆ ವಂಚಿಸಿದ್ದಾನೆ. ಈತ ತನ್ನ ಮೊಬೈಲ್ನಲ್ಲೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ವೆಂಕಟೇಶ್ ಮನೆಯಲ್ಲಿ ತಲಾಶ್ ನಡೆಸಿ ಎಪ್ಸಾನ್ ಪ್ರಿಂಟರ್ ಸೇರಿದಂತೆ ದಾಖಲಾತಿ ಸೀಜ್ ಮಾಡಲಾಗಿದೆ. ವಿವಿಧ ಇಲಾಖೆಯಲ್ಲಿ ಕೆಲಸ ಮಾಡ್ತಿರೋದಾಗಿ ಬಳಸುತ್ತಿದ್ದ ನಕಲಿ ಐಡಿ ಕಾರ್ಡ್, ಸರ್ಕಾರದ ಲೋಗೋ ಇರುವ ಟ್ಯಾಗ್ ವಶಕ್ಕೆ ಪಡೆಯಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ನಕಲಿ ಪತ್ರಗಳು ಲಭ್ಯವಾಗಿವೆ.. ಸದ್ಯ ಆರೋಪಿಯ ಜೊತೆ ಶಾಮಿಲಾಗಿರುವ ಮತ್ತಿಬ್ಬರ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.