ಬೆಂಗಳೂರು:- ತುಷಾರ್ ಗಿರಿನಾಥ್ ಹೆಸರಲ್ಲಿ ನಕಲಿ ಫೇಸ್ಬುಕ್ ತೆರೆದ ಹಿನ್ನೆಲೆ, ಸೈಬರ್ ವಂಚಕರ ವಿರುದ್ಧ FIR ದಾಖಲಾಗಿದೆ.
ಬಿಬಿಎಂಪಿ ಆಯುಕ್ತರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿ ಮಾಡಿ ಫೇಸ್ಬುಕ್ ಅಕೌಂಟ್ಗೆ ಖದೀಮರು ಕನ್ನ ಹಾಕಿರುವಂತಹ ಘಟನೆ ನಡೆದಿದೆ.
ತುಷಾರ್ ಗಿರಿನಾಥ್ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ. ತುಷಾರ್ ಗಿರಿನಾಥ್ ಖಾತೆ ಹ್ಯಾಕ್ ಆದ ಬಗ್ಗೆ ಪಾಲಿಕೆ ಮಾಹಿತಿ ಹಂಚಿಕೊಂಡಿದೆ. ಈ ಬಗ್ಗೆ ಕೇಂದ್ರ ಪೊಲೀಸ್ ಠಾಣೆಗೆ ಬಿಬಿಎಂಪಿಯಿಂದ ದೂರು ನೀಡಿದ್ದು ಸೈಬರ್ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.