ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ನಕಲಿ ವಸ್ತುಗಳ ಹಾವಳಿ ಜೋರಾಗಿದೆ. ಅನೇಕ ಬಾರಿ ಬೆಂಗಳೂರು ಪೊಲೀಸರು ನಕಲಿ ವಸ್ತುಗಳನ್ನು ಸೀಜ್ ಮಾಡ್ತಾನೆ ಇರ್ತಾರೆ. ಈಗ ಅಂತಹದ್ದೇ ಒಂದು ನಕಲಿ ಪ್ರಾಡಕ್ಟ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ವಿಲ್ಸನ್ ಗಾರ್ಡನ್ ಪೊಲೀಸರು ಭೇದಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ನಕಲಿ ಸಿಗರೇಟ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಐಟಿಸಿ ಕಂಪನಿಯ ಸಿಗರೇಟ್ ಮಾದರಿಯಲ್ಲಿ ಅಸಲಿ ಸಿಗರೇಟ್ ತಲೆ ಮೇಲೆ ಹೊಡೆದ ಹಾಗೆ ನಕಲಿ ಸಿಗರೇಟ್ ತಯಾರಿಸಲಾಗುತ್ತಿತ್ತು. ಜ್ಯೂಸ್ ಪ್ಯಾಕೆಟ್ಗಳು ತುಂಬಿರುವ ಬಾಕ್ಸ್ ಅಂತಾ ಹೇಳಿಕೊಂಡು ನಕಲಿ ಸಿಗರೇಟ್ ಸಪ್ಲೈ ಮಾಡಲಾಗುತ್ತಿತ್ತು. ಇದರಿಂದ ಐಟಿಸಿ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.
ಇನ್ನೂ ನಕಲಿ ಸಿಗರೇಟ್ ಮಾರಾಟ ಮಾಡುತ್ತಿರುವ ಆರೋಪಿಗಳ ಕಳ್ಳಾಟ ಐಟಿಸಿ ಕಂಪನಿಗೆ ಗೊತ್ತಾದ ಕೂಡಲೇ ವಿಲ್ಸಲ್ ಗಾರ್ಡನ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಅಷ್ಟೇ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಯೂಸಫ್ ಎಂಬಾತನನ್ನು ಬಂಧಿಸಿ 27 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಸೀಜ್ ಮಾಡಿದ್ದಾರೆ.
ಜೊತೆಗೆ ನಕಲಿ ಸಿಗರೇಟ್ ಸಾಗಿಸಲು ಬಳಸಿದ್ದ ಒಂದು ಗೂಡ್ಸ್ ವಾಹನ, ಆರೋಪಿ ಬಳಸುತ್ತಿದ್ದ ಕಾರನ್ನು ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ