ಬೆಂಗಳೂರು: ಪಿಂಚಣಿಯನ್ನು (Pension) ಜಮೆ ಮಾಡುವುದನ್ನು ಮುಂದುವರಿಸಲು ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು (Life Certificate) ಸಮಯಕ್ಕೆ ಸಲ್ಲಿಸುವುದು ಅತ್ಯವಶ್ಯ. ಸರ್ಕಾರಿ ಪಿಂಚಣಿದಾರರು ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ ಆಗಿದೆ.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಆಗಲು ಅಗತ್ಯಗಳು:
- ಆಧಾರ್ ಸಂಖ್ಯೆ
- ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ
- ಪಿಂಚಣಿ ವಿತರಣೆ ಏಜೆನ್ಸಿಯೊಂದಿಗೆ (ಬ್ಯಾಂಕ್ ಪೋಸ್ಟ್ ಆಫೀಸ್ ಇತ್ಯಾದಿ) ಆಧಾರ್ ಸಂಖ್ಯೆಯನ್ನು ನೋಂದಾಯಿಸಬೇಕು.
- ಬಯೋಮೆಟ್ರಿಕ್ ಸಾಧನ
- ಇಂಟರ್ನೆಟ್
ಯಾವುದೇ ಕಾರಣಕ್ಕಾಗಿ ಸಮಯಕ್ಕೆ ಸರಿಯಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಸಾಧ್ಯವಾಗದಿದ್ದರೆ ಮುಂದಿನ ತಿಂಗಳು ಅಥವಾ ನಂತರ ಸಲ್ಲಿಸಬಹುದು. ಆದರೆ, ನೆನಪಿಡಿ, ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಪಿಂಚಣಿ ನಿಲ್ಲುವ ಸಾಧ್ಯತೆ ಇದೆ. ಸರ್ಟಿಫಿಕೇಟ್ ಸೆಂಟ್ರಲ್ ಪಿಂಚಣಿ ಪ್ರೋಸೆಸಿಂಗ್ ಸೆಂಟರ್ಗಳಿಗೆ (CPPC) ತಲುಪಿದ ನಂತರವೇ ಹಣ ಬಿಡುಗಡೆಯಾಗುತ್ತದೆ.
ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್ಗಳನ್ನು ಈ ಏಳು ವಿಧಾನಗಳ ಮೂಲಕ ಸಲ್ಲಿಸಬಹುದು.
1) ಜೀವನ್ ಪ್ರಮಾಣ್ ಪೋರ್ಟಲ್
2) “UMANG” ಮೊಬೈಲ್ ಆ್ಯಪ್
3) ಡೋರ್ಸ್ಟೆಪ್ ಬ್ಯಾಂಕಿಂಗ್ (DSB)
4) ಅಂಚೆ ಕಚೇರಿಗಳಲ್ಲಿ ಬಯೋಮೆಟ್ರಿಕ್ ಸಾಧನಗಳ ಮೂಲಕ.
5) ವಿಡಿಯೋ ಆಧಾರಿತ ಗ್ರಾಹಕ ಗುರುತಿಸುವಿಕೆ ಪ್ರಕ್ರಿಯೆಯ ಮೂಲಕ
6) ಫೇಸ್ ದೃಢೀಕರಣ
7) ನೇರವಾಗಿ ಬ್ಯಾಂಕ್ಗೆ ಭೇಟಿ ನೀಡಿ ಲೈಫ್ ಸರ್ಟಿಫಿಕೇಟ್ ನಮೂನೆಗಳನ್ನು ಸಲ್ಲಿಸಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ಅಕ್ಟೋಬರ್ 1 ರಿಂದ ತಮ್ಮ ಜೀವನ್ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬಹುದು. ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ 1 ರಿಂದ ಆರಂಭವಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ ನಿಂದಲೇ ಸಲ್ಲಿಸಬಹುದು. 2024 ರ ಅಕ್ಟೋಬರ್ 1 ರಂದು ಲೈಫ್ ಸರ್ಟಿಫಿಕೇಟ್ ಸಲ್ಲಿಸಿದರೆ, ಅದು ಮುಂದಿನ ವರ್ಷ ನವೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿದೆ.