ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಹಿರಿಯ ಆಟಗಾರರು ರಣಜಿ ಆಡಲು ಮನಮಾಡಿದಾಗ ದೊಡ್ಡ ಮಟ್ಟಿನ ನಿರೀಕ್ಷೆಗಳಿದ್ದವು, ಅದಕ್ಕೆ ತಕ್ಕಂತೆ ಬುಧವಾರವಷ್ಟೇ ಮುಂಬೈ ರಣಜಿ ತಂಡದ ನಾಯಕ ಅಜಿಂಕ್ಯ ರಹಾನೆ ಅವರು ಸಹ ರೋಹಿತ್ ಅವರು ಖಂಡಿತವಾಗಿಯೂ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಆಶಾವಾದದಿಂದ ನುಡಿದಿದ್ದರು.
BJP ಒಡೆದ ಮನೆ, ಮೂರು ಬಾಗಿಲು, ನಮ್ಮ ಪಕ್ಷದಲ್ಲಿ 12 ಬಾಗಿಲು ಇಲ್ಲ ಎಂದಿದ್ರು: ಶಿವರಾಜ್ ತಂಗಡಗಿ ವ್ಯಂಗ್ಯ
ಆದರೆ ಎಲ್ಲರ ನಿರೀಕ್ಷೆಯನ್ನೂ ಇದೀಗ ರೋಹಿತ್ ಶರ್ಮಾ ಹುಸಿ ಮಾಡಿದ್ದಾರೆ. ಜಮ್ಮು ಕಾಶ್ಮೀರದ ವಿರುದ್ಧ ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 3 ರನ್, ವೇಗಿ ಉಮರ್ ನಝೀರ್ ಬೌಲಿಂಗ್ ನಲ್ಲಿ ಪಿಕೆ ಡೋಗ್ರಾ ಅವರಿಗೆ ಕ್ಯಾಚಿತ್ತು ಔಟಾದರು.
ರಣಜಿ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಫ್ಲಾಫ್ ಶೋ ಮುಂದುವರೆದಿದೆ. ದೇಶೀಯ ಟೂರ್ನಿಯಲ್ಲಿ ಮುಂಬೈ ಪರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿದ್ದು, ಒಂದು ರನ್ ಗಳಿಸಲು ಪರದಾಡುತ್ತಿದ್ದಾರೆ.
ಲೋಕಲ್ ಬೌಲರ್ಗಳ ಎದುರು ರನ್ ಕಲೆ ಹಾಕುವಲ್ಲಿ ಕ್ಯಾಪ್ಟನ್ ರೋಹಿತ್ ಎಡವಿದರು. ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಲು ಬಂದ ಇವರು ಇಲ್ಲೂ ರನ್ ಬರ ಎದುರಿಸಿದರು. ಸಿಂಗಲ್ ಡಿಜಿಟ್ನಲ್ಲೇ ಆಟ ಮುಗಿಸಿದರು.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದರು. ಆದರೆ, ಜಮ್ಮು ಕಾಶ್ಮೀರ್ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಾನು ಎದುರಿಸಿದ 19 ಎಸೆತಗಳಲ್ಲಿ 3 ರನ್ ಬಾರಿಸಿ ಔಟ್ ಆದರು. ಈ ಮೂಲಕ ರಣಜಿ ಟ್ರೋಫಿಯಲ್ಲೂ ನಿರಾಸೆ ಕಂಡರು.
ಅಂತರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲ ರಣಜಿಯಲ್ಲೂ ರೋಹಿತ್ ವಿಫಲರಾದರು. ಹೀಗಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರೋ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ.