ಫೇಸ್ ಬುಕ್ ನಲ್ಲಿ ಭಾರತೀಯ ಯುವಕನೋರ್ವ ಪಾಕಿಸ್ತಾನ್ ಯುವತಿ ಜೊತೆ ಲವ್ ನಲ್ಲಿ ಬಿದ್ದಿದ್ದಾರೆ.
ಹೊಸವರ್ಷ 2025: ನಶೆಯಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಯುವಕನಿಗೆ ಗೂಸಾ!
ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಯುವತಿ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಇದಾದ ಬಳಿಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆದ್ರೆ, ತಪಾಸಣೆ ವೇಳೆ ಭಾರತದಿಂದ ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಆರೋಪದ ಮೇಲೆ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು (30) ಎಂದು ಗುರುತಿಸಲಾಗಿದೆ.
ಡಿಸೆಂಬರ್ 27ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಬಾದಲ್ ಬಾಬು ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಪಾಕಿಸ್ತಾನದ ವಿದೇಶಿಯರ ಕಾಯಿದೆ, 1946ರ ಸೆಕ್ಷನ್ 13 ಮತ್ತು 14ರ ಅಡಿಯಲ್ಲಿ ಬಾದಲ್ ಬಾಬು ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟ್ಗೆ ಹಾಜರುಪಡಿಸಲಾಯಿತು. ಇನ್ನೂ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರು ಜನವರಿ 10, 2025ರಂದು ಬಿಡುಗಡೆಯಾಗಲಿದ್ದಾರೆ