ಉತ್ತರ ಭಾರತ:- ವಿಪರೀತ ಚಳಿ, ಮಳೆ ಇರುವ ಹಿನ್ನೆಲೆ, ಉತ್ತರ ಭಾರತದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ತ್ರಿವೇಣಿ ಸಂಗಮದಲ್ಲಿ ಕುಂಭಮೇಳ: ಲಕ್ನೋ ಜಂಕ್ಷನ್ಗೆ ವಿಶೇಷ ರೈಲು ವ್ಯವಸ್ಥೆ!
ಉತ್ತರ ಭಾರತದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿ ಅಲ್ಲಿ ಸರ್ಕಾರಗಳು ಘೋಷಣೆ ಮಾಡಿವೆ. ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಸುರಿಯುತ್ತಿರೋ ಧಾರಕಾರ ಮಳೆ ಹಾಗೂ ಕೊರೆವ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರ ಭಾರತ ಮತ್ತು ಹರಿಯಾಣದಲ್ಲಿ ಬಿಟ್ಟು ಬಿಡದೇ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ವಾತವಾರಣ ಬದಲಾಗಿ ಕೊರೆವ ಚಳಿಯಲ್ಲಿಯೇ ಜನರು ತತ್ತರಿಸಿ ಹೋಗಿದ್ದಾರೆ.
ಈ ಹಿನ್ನಲೆ ಹರಿಯಾಣದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಜನವರಿ 1ರಿಂದ 15ವರೆಗೆ ಖಾಸಗಿ, ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ.
ಡಿಸೆಂಬರ್ ಬಂದ್ರೆ ಅದು ಉತ್ತರ ಭಾರತಕ್ಕೆ ಕೊರೆಯುವ ಚಳಿಯನ್ನು ಹೊತ್ತುಕೊಂಡು ಬರುತ್ತದೆ. ಆದ್ರೆ ಈ ಬಾರಿ ಕೊರೆಯುವ ಚಳಿಯ ಜೊತೆ ಮಳೆಯೂ ಕೂಡ ಹಾಜರಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ.