ಮಹದೇವಪುರ: ಒಳ ಮೀಸಲಾತಿಯನ್ನ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರದ ವ್ಯಾಪ್ತಿಗೆ ತಂದಿದ್ರು ಜಾರಿ ಮಾಡಲು ಸರ್ಕಾರ ಮೀನಾಮೇಷವೆಣಿಸುತ್ತಿದ್ದು ರಾಜ್ಯ ಕಾಂಗ್ರೇಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಸುಳ್ಳು ಆಶ್ವಾಸನೆಗಳನ್ನ ಕೊಟ್ಟಿದೆ ಅಂತ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಲ್ಲಿ ಮಾದ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಚುನಾವಣೆಗೂ ಮುನ್ನ ಒಳ ಮೀಸಲಾತಿಯನ್ನ ಜಾರಿಗೆ ತರ್ತಿವಿ ಪ್ರಣಾಳಿಕೆಯಲ್ಲಿ ಹಾಕ್ತೀವಿ ಅಂತ ಹೇಳಿದ್ರು. ಜೊತೆಗೆ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡ್ತೀವಿ ಅಂತ ಹೇಳಿದ್ರು ಆದ್ರೆ ಈವರೆಗೂ ಮಾಡಿಲ್ಲ ಅಂತ ಆಕ್ರೋಶ ಹೊರ ಹಾಕಿದರು.
https://ainlivenews.com/good-news-for-farmers-90-subsidy-on-petrol-diesel-based-pump-sets/
.
ಅಲ್ಲದೆ ಕೆಲ ಮೂರ್ಖ ಮಂತ್ರಿಗಳು ಗೃಹ ಸಚಿವರ ಮನೆಯಲ್ಲಿ ಸಭೆ ಸೇರಿ ದತ್ತಾಂಶ ಬಂದಿಲ್ಲ ಇಂಪೀರಿಕಲ್ ರಿಪೋರ್ಟ್ ಬಂದಿಲ್ಲ ಡೆಟಾ ಇಲ್ಲ ಅಂತ ಮೂರ್ಖ ಮಂತ್ರಿಗಳು ಚರ್ಚೆಯನ್ನ ಮಾಡ್ತಿದ್ದು ಸರ್ಕಾರದ ವಿರುದ್ದ ಶೋಷಿತ ವರ್ಗಕ್ಕೆ ಅನುಮಾನ ಬಂದಿದ್ದು ಇವರ ಮೇಲೆ ವಿಶ್ವಾಸ ಕಳೆದು ಹೋಗಿದೆ ಎಂದರು.
ರಾಜ್ಯದಲ್ಲಿ ಶೋಷಿತ ವರ್ಗ ದಂಗೆ ಎದ್ದಾಗ ನ್ಯಾಯ ಸಿಗಲಿದ್ದು ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಮುಂದಾಗಬೇಕು ಅಂತ ಹೇಳಿದ್ದರು. ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಎಚ್.ವಿ. ಮಂಜುನಾಥ್ ಮಾತನಾಡಿ, ಸುಪ್ರೀಂಕೋರ್ಟ್ ಅದೇಶ ಅನ್ವಯ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರದ ಮೇಲೆ ಭರವಸೆ ಇಲ್ಲ. ಚುನಾವಣೆ ಗಿಮಿಕ್ಗಾಗಿ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಒಪ್ಪಿಗೆ ನೀಡಿದೆ.
ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಉದ್ದೇಶಪೂರ್ವಕವಾಗಿ ಮುಂದೂಡಲು ತಂತ್ರ ಅನುಸರಿಸುತ್ತಿದೆ. ಜಾರಿಗೊಳಿಸದಿದ್ದರೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹೋರಾಟ ರ್ಾರದ ಸಿದ್ಧ ದಾಯಣ మి ಶ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಂಕರಪ್ಪ, ಗಂಗಾಧರಪ್ಪ, ಈರಣ್ಣ ಮೌರ್ಯ, ಕೃಷ್ಣಮೂರ್ತಿ, ಮಾದೇಶ್ ಮತ್ತಿತರರು ಉಪಸ್ಥಿತರಿದ್ದರು.