ಬಾಲಿವುಡ್ ಬ್ಯೂಟಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿಗೆ ನಿರೀಕ್ಷಿಸಿದ ಮಟ್ಟಿಗಿನ ಯಶಸ್ಸು ಲಭಿಸದೆ ಹೋದ್ರು ಆಫರ್ ಗಳಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಇದೀಗ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾಗೆ ಜಾನ್ವಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಚ್ಚರಿ ಏನೆಂದರೆ, ‘ದೇವರ’ ಬಿಡುಗಡೆ ಆಗುವುದಕ್ಕೂ ಮುನ್ನವೇ ತೆಲುಗಿನಲ್ಲಿ ಅವರು ಒಪ್ಪಿಕೊಳ್ಳುವ ಹೊಸ ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ದೇವರ ಸಿನಿಮಾದ ಬಳಿಕ ನಟಿಸಲಿರುವ ಸಿನಿಮಾಗಳಿಗೆ ಶ್ರಿದೇವಿ ಪುತ್ರಿ ಸಂಭಾವನೆ ಏರಿಸಿಕೊಂಡಿದ್ದು, ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಎನ್ನಲಾಗಿದೆ. ಜಾನ್ವಿ ಸಿನಿಮಾಗಳು ಹೆಚ್ಚು ಸದ್ದು ಮಾಡದೆ ಹೋದ್ರು ಆಕೆಯ ಸಂಭಾವನೆ ಮಾತ್ರ ಹೆಚ್ಚುತ್ತಲೆ ಇದೆ. ಆದ್ರೆ ಈ ಬಗ್ಗೆ ಜಾನ್ವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.