ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠ ಆವರಣದ ಮೂಜಗಂ ಸಭಾಭವನದಲ್ಲಿವಿಶಿಷ್ಟ ಮತ್ತು ಅಪರೂಪದ ಗೆಡ್ಡೆಗೆಣಸುಗಳ ಪ್ರದರ್ಶನ ನಡೆಯಿತು. ಬಗೆಬಗೆಯ ಗೆಡ್ಡೆಗೆಣಸುಗಳನ್ನು ಕಂಡು ಜನರು ಬೆರಗಾದರು. ಸಹಜ ಸಮೃದ್ಧ, ಕ್ರಾಪ್ಸ್ ಫೋರ್ ಎಚ್ಡಿ ಸಂಸ್ಥೆ, ರೋಟರಿ ಕ್ಲಬ್ ಆಯೋಜಿಸಿದ ಈ ಪ್ರದರ್ಶನದಲ್ಲಿ ಜಾಗೃತಿಯೂ ಮೂಡಿಸಲಾಯಿತು.
ಗುಲಾಬಿ, ಕೆಂಪು, ಬಿಳಿ, ನೀಲಿ, ಕಿತ್ತಳೆ, ಹಳದಿ ಬಣ್ಣದ ಸಿಹಿಗೆಣಸು, ನೀಲಿ ಹಾಗೂ ಬಿಳಿ ಕಾಚಲ್, ಕೆಸು, ಕಪ್ಪು ಅರಿಸಿನ, ಸುವರ್ಣಗೆಡ್ಡೆ, ತಾಯಿ ಶುಂಠಿ, ಕಪ್ಪು ಶುಂಠಿ, ಕಿಡ್ನಿ ಆಲೂಗೆಡ್ಡೆ, ಕೋವೆಗೆಡ್ಡೆ, ಭೂ ಆರೇಂಜ್ ಗೆಣಸು, ಉದ್ದನೆಯ ಕೆಸು, ಮರಗೆಣಸುಕಡ್ಡಿ, ಗ್ರೇಟರ್ ಯಾಮ್, ಲೆಸ್ಸರ್ ಯಾಮ್, ಯಾಮ್ ಬೀನ್, ಕ್ಯಾನಾ, ಟ್ಯಾರೊ, ಏರಿಯಲ್ ಟ್ಯುಬರ್ ಮುಂತಾದವುಗಳನ್ನು ನೋಡಿದರು. ಮೊಣಕಾಲು ನೋವಿಗೆ ರಾಮಬಾಣವಾಗಿರುವ,
Health Tips: ಚಳಿಗಾಲದಲ್ಲಿ ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?
ಕುಂಡಗಳಲ್ಲೂ ಬೆಳೆಯಬಹುದಾದ ಬಳ್ಳಿ ಆಲೂಗಡ್ಡೆ, ನಾಗರಹೊಳೆ ಭಾಗದಲ್ಲಿ ಕಂಡುಬರುವ, ಫಿಲಿಫಿನ್ಸ್ನ ರಾಷ್ಟ್ರೀಯ ಆಹಾರ ಹಾಗೂ ಕ್ಯಾನ್ಸರ್ ನಿರೋಧಕವಾದ ಪರ್ಪಲ್ ಯಾಮ್, ಮಾವಿನ ರುಚಿ, ವಾಸನೆವುಳ್ಳ ಮಾವಿನ ಶುಂಠಿ, ಧಾರವಾಡದ ಅಖಿಲ ಭಾರತ ಗೆಡ್ಡೆಗೆಣಸು ಸಂಶೋಧನಾ ಯೋಜನೆಯಡಿ ಅಭಿವೃದ್ಧಿಪಡಿಸಿದ,
ಅಪೌಷ್ಟಿಕತೆ ನಿವಾರಕ ‘ಭೂಸೋನ’, ‘ಭೂ ಕೃಷ್ಣ’, ಹಾಗೂ ಟಿಎಸ್–7 ತಳಿಯ ಸಿಹಿಗೆಣಸುಗಳು ಜನರು ಹಾಗೂ ರೈತರನ್ನು ಆಕರ್ಷಿಸಿದವು. ‘ದೇಶವನ್ನು ಬಾಧಿಸುತ್ತಿರುವ ಅಪೌಷ್ಟಿಕತೆ ಸಮಸ್ಯೆಗೆ ವಿಟಮಿನ್ ಎ ಹಾಗೂ ಸಿ, ಜಿಂಕ್, ಕಬ್ಬಿಣದ ಕೊರತೆ ಕಾರಣ. ಈ ಅಂಶಗಳು ಯತೇಚ್ಛವಾಗಿರುವ ‘ಭೂಸೋನ’, ‘ಭೂ ಕೃಷ್ಣ’, ಹಾಗೂ ಟಿಎಸ್–7 ತಳಿಯ ಸಿಹಿಗೆಣಸುಗಳನ್ನು ಧಾರವಾಡದ ಅಖಿಲ ಭಾರತ ಗೆಡ್ಡೆಗೆಣಸು ಸಂಶೋಧನಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ.