ಬೆಳಗಾವಿ: ಬೆಳಗಾವಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಂಟೇನರ್ ನಲ್ಲಿ ಕಂಪಾರ್ಟ್ಮೆಂಟ್ ಮಾಡಿ ಮದ್ಯ ಸಾಗಾಟ ಜಾಲ ಪತ್ತೆಯಾಗಿದೆ. ಕಂಟೇನರ್ ನಲ್ಲಿ ಐದು ಅಡಿಯಲ್ಲಿ ಜಾಗದಲ್ಲಿ ಕಂಪಾರ್ಟ್ಮೆಟ್ ಮಾಡಲಾಗಿತ್ತು. ಕಂಪಾರ್ಟ್ಮಮೆಂಟ್ ಬಗ್ಗೆ ಯಾರಿಗೂ ಅನುಮಾನ ಬರದಂತೆ ಶೆಟರ್ ಅಳವಡಿಸಿ ಐಡಿಯಾ ಮಾಡಿದ್ದ ಖದೀಮರು ಕೊನೆಗೂ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಜಾಲ ಬಲೆಗೆ ಬಿದ್ದಿದೆ.
ಅಬಕಾರಿ ಇನ್ಸ್ಪೆಕ್ಟರ್ ಬಾಳಗೌಡ ಪಾಟೀಲ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿತ್ತು. ಬಳಿಕ ಬಿಹಾರ ಮೂಲದ ಸಬೋದ ಮಬತೋ ಬಂಧನ ಮಾಡಲಾಗಿದೆ. 25 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. 80 ಲೀಟರ್ ಬ್ಲೆಂಡೆಡ್ ಮದ್ಯ ಹಾಗೂ ಮದ್ಯದ ಬಾಟಲಿಯ ಕ್ಯಾಪ್ ವಶಕ್ಕೆ ಪಡೆಯಲಾಗಿದೆ. ಖಾಲಿ ಬಾಟಲಿಯಲ್ಲಿ ಬ್ಲಂಡೆಡ್ ಮದ್ಯ ತುಂಬು ಓರಿಜನಲ್ ಕ್ಯಾಪ್ ಹಾಕಲು ಪ್ಲ್ಯಾನ್ ಮಾಡಲಾಗಿತ್ತು.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಈ ಮೂಲಕ ಗ್ರಾಹಕರನ್ನು ಯಾಮಾರಿಸಲು ಪ್ಲ್ಯಾನ್ ಮಾಡಿದ್ದ ದುಷ್ಕರ್ಮಿಗಳು,ಕ್ಯಾಪ್ ಓಪನ್ ಮಾಡಿದ್ರೂ ನಕಲಿ ಅಂತ ಅನುಮಾನ ಬರದಂತೆ ಐಡಿಯಾ ಮಾಡಿದ್ದರು.ಗೋವಾದಿಂದ ಎರಡು ಚೀಲ್ ಮದ್ಯದ ಬಾಟಲಿಯ ಅಸಲಿ ಕ್ಯಾಪ್ ಗಳು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ನಾಲ್ಕು ಖತರನಾಕ್ ಪ್ಲ್ಯಾನ್ ಬಯಲು ಮಾಡಿದ್ದ ಅಧಿಕಾರಿಗಳು ಈಗ ಮತ್ತೊಂದು ಪ್ಲ್ಯಾನ್ ಬಯಲು ಮಾಡಿದ್ದಾರೆ. ಟ್ರಾನ್ಸಫರ್ಮರ್, ರದ್ದಿ, ಫ್ಲೈವುಡ್ ನಲ್ಲಿ ಪುಷ್ಪ ಮಾದರಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡಲಾಗಿತ್ತು. ನಾಲ್ಕು ಪ್ರಕರಣ ಬಯಲು ಮಾಡಿದ್ದ ಅಬಕಾರಿ ಅಧಿಕಾರಿಗಳು,ನಕಲಿ ಮದ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳ ಮನವಿ ಮಾಡಿದ್ದಾರೆ.