ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿರುವ ಪ್ರಸಂಗ ಬೆಳಕಿಗೆ ಬರುತ್ತಿವೆ. ಅದರಂತೆಯೇ ಮತ್ತೊಂದು ಘಟನೆ ಇದೀಗ ವರದಿಯಾಗಿದೆ.
ಹೌದು ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಗಾಡಿ ಓವರ್ ಟೆಕ್ ವಿಚಾರಕ್ಕೆ ಶುರುವಾದ ಫೈಟ್ ಅವಾಚ್ಯ ಶಬ್ದಗಳ ಬಳಕೆವರೆಗೆ ಮುಂದುವರೆದಿದೆ.
ಕೊಟ್ಟ ಸಾಲ ವಾಪಸ್ ಪಡೆಯಲು ಇಲ್ಲಿದೆ ನೋಡಿ ಪರಿಹಾರ..! ಈ ರೀತಿ ಮಾಡಿದ್ರೆ ಸಾಕಂತೆ!
ಕೆಟ್ಟ ಕೆಟ್ಟ ಪದಗಳಿಂದ ಇಬ್ಬರು ಚಾಲಕರು ಜಗಳ ಮಾಡಿದ್ದಾರೆ. ಅದಲ್ಲದೆ ಮಧ್ಯ ರಸ್ತೆಯಲ್ಲಿ ಕಾರಿನ ಒಳಗಡೆ ಕೂತು ಮಧ್ಯ ಬೆರಳು ತೋರಿಸಿ ಅಸಭ್ಯ ವರ್ತನೆ ಕೂಡ ತೋರಿದ್ದಾರೆ. ಈ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.