ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ಗೆ 6106 ಕೈದಿ ನಂಬರ್ ನೀಡಲಾಗಿದೆ. ಆದರೆ, ಆತನ ಅಭಿಮಾನಿಗಳು ಇದೇ ಕೈದಿ ನಂಬರ್ ಅನ್ನು ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಂದಾಭಿಮಾನಿಗಳು ಕೈ, ಎದೆ, ಕುತ್ತಿಗೆ ಸೇರಿದಂತೆ ಪುಷ್ಠ ಭಾಗದ ಮೇಲೂ ಕೈದಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಪುಟ್ಟ ಮಗುವಿಗೆ ಕೈದಿ ನಂಬರ್ 6106 ಎಂದು ಸಿದ್ಧಪಡಿಸಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ದರ್ಶನ್ರ ಹಲವು ಅಭಿಮಾನಿಗಳು ಬೈಕ್ಗಳು, ಬಸ್ಗಳು, ಆಟೋಗಳು, ಗೂಡ್ಸ್ ವಾಹನಗಳು ಸೇರಿ ವಿವಿಧೆಡೆ ಡಿ ಬಾಸ್ ಸ್ಟಿಕ್ಕರ್ ತೆರವುಗೊಳಿಸಿ ‘ಕೈದಿ ನಂಬರ್ 6106 ಹಾಗೂ ಕೈ ಕೋಳ’ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಇದೇ ಕೈದಿ ನಂಬರ್ 6106 ಅನ್ನು ಕೈ, ಎದೆ, ಭುಜ, ಕುತ್ತಿಗೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಯುವತಿಯೊಬ್ಬಳು ತನ್ನ ಪುಷ್ಠಭಾಗದ ಮೇಲೆ ಖೈದಿ ನಂ 6106 ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಇನ್ನೂ ಇಲ್ಲೊಬ್ಬ ದರ್ಶನ್ ಅಭಿಮಾನಿ ತನ್ನ ಪುಟ್ಟ ಕಂದಮ್ಮನಿಗೆ ಫೋಟೋ ಶೂಟ್ ಮಾಡಿಸುವಾಗ ಜೈಲು ಕೈದಿಗಳಿಗೆ ನೀಡುವಂತಹ ಬಿಳಿಯ ಬಟ್ಟೆಯನ್ನು ಹಾಕಿ, ಅದರ ಮೇಲೆ 6106 ಎಂದು ಸ್ಟಿಕ್ಕರ್ ಅಂಟಿಸಿ ಕೈದಿ ಸಂಖ್ಯೆಯನ್ನು ಕೊಟ್ಟಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)