ಕಲಬುರಗಿ:– ಜಿಲ್ಲೆಯ ಆಳಂದ ತಾಲ್ಲೂಕಿನ ವಾಗ್ದಾರಿ ರಸ್ತೆಯ ಖಾನಾಪುರ ಬಳಿ ಗುಂಡಿಕ್ಕಿ ಮಾಜಿ ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ ನಡೆದಿರುವ ಘಟನೆ ಜರುಗಿದೆ.
ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧದ ಮಾನನಷ್ಟ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ!
ವಿಶ್ವನಾಥ್ ಜಮಾದಾರ(50) ಕೊಲೆಯಾದ ಮಾಜಿ ಗ್ರಾಂ ಸದಸ್ಯ. ವಿಶ್ವನಾಥದ ಜಮಾದಾರ್ ಅವರು, ಪಡುಸಾವಳಿಯಿಂದ ಆಳಂದ ಪಟ್ಟಣಕ್ಕೆ ಬೈಕ್ ನಲ್ಲಿ ಬರ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದಷ್ಕರ್ಮಿಗಳಿಂದ ಮೂರು ಬಾರಿ ಫೈರಿಂಗ್ ಮಾಡಿ ಕೊಲೆ ನಡೆದಿದೆ.
ಸ್ಥಳಕ್ಕೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.