ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರ ಎರಡನೇ ಮದುವೆ (Marriage) ನಡೆಯಿತು. ನಟಿ ಮಲೈಕಾ ಅರೋರಾ (Malaika Arora) ವಿಚ್ಛೇದನದ ನಂತರ ಒಂಟಿಯಾಗಿಯೇ ಉಳಿದುಕೊಂಡಿದ್ದ ಅರ್ಬಾಜ್, ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ನಡೆಯುತ್ತಿದ್ದಂತೆಯೇ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಸದ್ಯ ನಟಿ ಮಲೈಕಾ ಅರೋರಾ ರಿಯಾಲಿಟಿ ಶೋನಲ್ಲಿ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅವರ ಮದುವೆ ವಿಚಾರ ಪ್ರಸ್ತಾಪಿಸಲಾಯಿತು. ಯಾವಾಗ ಮದುವೆ ಆಗಲಿದ್ದೀರಿ ಎಂದು ಕೇಳಲಾಯಿತು. ಕೊಂಚವೂ ಯೋಚನೆ ಮಾಡದೇ ಮುಂದಿನ ವರ್ಷ ಹೊಸ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟ್ ಮಾಡುತ್ತಿದ್ದಾರೆ. ಸಹಜೀವನ ನಡೆಸುತ್ತಿರುವ ರೀತಿಯಲ್ಲೇ ಬದುಕುತ್ತಿದ್ದಾರೆ. ಅರ್ಜುನ್ ಜೊತೆ ಸಾಕಷ್ಟು ದೇಶಗಳನ್ನೂ ಮಲೈಕಾ ಸುತ್ತಿದ್ದಾರೆ. ಕೊನೆಗೂ ಮದುವೆ ವಿಷಯದ ಕುರಿತು ಮಲೈಕಾ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ತಿಂಗಳು ಮತ್ತು ಡೇಟ್ ಮಾತ್ರ ತಿಳಿಸಿಲ್ಲ.