ಢಾಕಾ: ಬಾಂಗ್ಲಾದೇಶದ (Bangladesh) ಪ್ರಧಾನಿ ಶೇಖ್ ಹಸೀನಾ (Sheikh Hasina) ತನ್ನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಪ್ರತಿಭಟನಾಕಾರರು ಬಾಂಗ್ಲಾದ ಮಾಜಿ ಕ್ರಿಕೆಟಿಗ, ಮತ್ತು ಸಂಸದ ಮಶ್ರಫೆ ಮೊರ್ತಾಜಾ (Mashrafe Mortaza) ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮಶ್ರಫ್-ಬಿನ್-ಮೊರ್ತಾಜಾ ಅವರು ಶೇಖ್ ಹಸಿನಾ ಅವರ ಪಕ್ಷವಾದ ಅವಾಮಿ ಲೀಗ್ನಿಂದ ಖುಲ್ನಾ ವಿಭಾಗದ ನರೈಲ್ ಕ್ಷೇತ್ರದ ಸಂಸದರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದರು. ಪುಂಡರು ಮೊರ್ತಾಜಾ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
Paris Olympics 2024: ಸೆಮಿಫೈನಲ್ಗೆ ಲಗ್ಗೆ ಇಟ್ಟ ಕುಸ್ತಿಪಟು ವಿನೇಶ್ ಫೋಗಟ್
ಮೊರ್ತಾಜಾ ಅವರು ಬಾಂಗ್ಲಾದೇಶದ ಪರವಾಗಿ 117 ಕ್ರಿಕೆಟ್ ಪಂದ್ಯಗಳನ್ನಾಡಿ ನಿವೃತ್ತಿ ಹೊಂದಿದ್ದಾರೆ. ಅಂತರರಾಷ್ಟ್ರಿಯ ಕ್ರಿಕೆಟ್ನಲ್ಲಿ 390 ವಿಕೆಟ್ ಗಳಿಸಿ 2,955 ರನ್ ಗಳಿಸಿದ್ದರು.
ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಅವರು 2018 ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಇವರು ರೈಲ್ ಕ್ಷೇತ್ರದಿಂದ ಅವರು ಎರಡು ಬಾರಿ ಸಂಸದರಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪುಂಡರು ಢಾಕಾದಲ್ಲಿರುವ ಅವಾಮಿ ಲೀಗ್ ಪಕ್ಷದ ಕಚೇರಿಗೂ ಕೂಡ ಬೆಂಕಿ ಹಚ್ಚಿದ್ದು, ಸುಭಾಷ್ ಚಂದ್ರ ಭೋಸ್ ಹೌಸ್ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.